ಕರ್ನಾಟಕ

karnataka

ETV Bharat / state

ಸಾರಿಗೆ ನೌಕರರ ಸಮಸ್ಯೆಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ: ಡಿ.ಕೆ.ಶಿವಕುಮಾರ್ ಆರೋಪ - KPCC President DK Shivakumar about ksrtc employees strike

ಸರ್ಕಾರಕ್ಕೆ ಯಾವುದೇ ಸಮಸ್ಯೆಗಳನ್ನ ನಿಭಾಯಿಸುವ ಸಾಮರ್ಥ್ಯವಿಲ್ಲ. ಸಮರ್ಪಕವಾಗಿ ಆಡಳಿತ ನಡೆಸುವಲ್ಲಿ ಸರ್ಕಾರ ಸೋತಿದೆ. ಸಾರಿಗೆ ನೌಕರರ ಸಮಸ್ಯೆಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

KPCC President DK Shivakumar about ksrtc employees strike
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

By

Published : Apr 6, 2021, 3:16 PM IST

ರಾಯಚೂರು:ಸಾರಿಗೆ ನೌಕರರ ಸಮಸ್ಯೆಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಜಿಲ್ಲೆಯ ಸಿಂಧನೂರು ತಾಲೂಕಿನ ಪಂಗಡದಿನ್ನಿ ಕ್ಯಾಂಪ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಯಾವುದೇ ಸಮಸ್ಯೆಗಳನ್ನ ನಿಭಾಯಿಸುವ ಸಾಮರ್ಥ್ಯವಿಲ್ಲ. ಸಮರ್ಪಕವಾಗಿ ಆಡಳಿತ ನಡೆಸುವಲ್ಲಿ ಸರ್ಕಾರ ಸೋತಿದೆ. ಸಿನಿಮಾ ಮಂದಿರಗಳ ವಿಚಾರದಲ್ಲೂ ತಪ್ಪು ನಿರ್ಧಾರ ಮಾಡಿ ಅಲ್ಲಿನ ಜನರಿಗೆ ಸಹ ತೊಂದರೆ ಕೊಡುತ್ತಿದೆ. ನಾವು ಬರುವಾಗ ಹೆಲಿಕ್ಯಾಪ್ಟರ್​ನಲ್ಲಿ ಬಂದಿದ್ದೇವೆ. ಅಲ್ಲಿ ತುಂಬಾ ಜನ ಇದ್ದರು, ಹಾಗಾದರೆ ಅಲ್ಲಿ ರೂಲ್ಸ್ ಅನ್ವ ಆಗುವುದಿಲ್ವಾ? ಬಸ್​ಗೆ ಮಾತ್ರ ಯಾಕೆ ನಿಯಮ ಜಾರಿ ಮಾಡಬೇಕು ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಮಸ್ಕಿ ಉಪಚುನಾವಣೆಯಲ್ಲಿ ಜನರ ಉತ್ಸಾಹ ಹೆಚ್ಚಾಗಿದೆ. ಜನರ ಈ ಉತ್ಸಾಹ ನಾನು ಎಲ್ಲೂ ನೋಡಿಲ್ಲ. ಪ್ರಚಾರಕ್ಕೆ ಹೋದಲ್ಲೆಲ್ಲ ಕೂಲಿ ಕಾರ್ಮಿಕರು ಸಹ ದೇಣಿಗೆ ಕೊಡುತ್ತಿದ್ದಾರೆ. ಕೈಲಾದಷ್ಟು ಹಣ ನೀಡಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇದನ್ನೇ ಬಿಜೆಪಿಯವರು ದುಡ್ಡು ಕೊಟ್ಟು ವಾಪಸ್ ತೆಗದುಕೊಳ್ಳುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರ: ನಾಳೆ ರಸ್ತೆಗಿಳಿಯಲಿವೆ 2 ಸಾವಿರ ಹೆಚ್ಚುವರಿ ಖಾಸಗಿ ಬಸ್‌ಗಳು

ಮಸ್ಕಿಯಲ್ಲಿ ನಡೆಯುತ್ತಿರುವುದು ಬಸನಗೌಡ - ತುರವಿಹಾಳ ಎಲೆಕ್ಷನ್​​ ಅಲ್ಲ. ಸ್ವಾಭಿಮಾನಿಗಳ ಚುನಾವಣೆಯಾಗಿದೆ. ಸ್ವಾಭಿಮಾನಕ್ಕೆ ಜನ ತೀರ್ಪು ಕೊಡುತ್ತಾರೆ. 25 ಸಾವಿರ ಅಂತರದಲ್ಲಿ ಬಸನಗೌಡ ಗೆಲುವು ಸಾಧಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್​​ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details