ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಅಪರಿಚಿತನಿಂದ ವ್ಯಕ್ತಿಗೆ ಚಾಕು ಇರಿತ: ಸಿಸಿಟಿವಿ ಭಯಾನಕ ದೃಶ್ಯ ಸೆರೆ! - Knife stab on person by stranger in raichur

ವ್ಯಕ್ತಿಯೊಬ್ಬನ ಮೇಲೆ ಚಾಕು ಇರಿದು ಹತ್ಯೆ ಮಾಡಲು ಯತ್ನಿಸಿರುವ ಘಟನೆ ರಾಯಚೂರಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Knife stab on person by stranger in raichur
'ಸಿಸಿಟಿವಿ'ಯಲ್ಲಿ ದೃಶ್ಯ ಸೆರೆ

By

Published : May 29, 2020, 7:49 PM IST

ರಾಯಚೂರು: ಅಪರಿಚಿತನೊಬ್ಬ ನಗರದ ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಪದ್ಮನಾಭ ಚಿತ್ರಮಂದಿರ ಹತ್ತಿರದ ಬೇಕರಿಯ ಬಳಿ, ಮಹ್ಮದ್ ಇಬ್ರಾಹಿಂ ಕಲಾಲ್ ಅಲಿಯಾಸ್ ವಾಯಿದೆ ಎಂಬ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿದೆ.

ಗುರುವಾರ ರಾತ್ರಿ ವೇಳೆ ಇಬ್ರಾಹಿಂ ತನ್ನ ಬೇಕರಿ ಬಳಿ ಬೈಕ್ ಮೇಲೆ ಕುಳಿತಿದ್ದ. ಈ ವೇಳೆ ಅಪರಿಚಿತ ವ್ಯಕ್ತಿ ದಿಢೀರ್​ ಬಂದು ಇಬ್ರಾಹಿಂನನ್ನು ಮಾತನಾಡಿಸಿ, ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ಸ್ಥಳದಲ್ಲಿದ್ದವರು ಹಿಡಿಯಲು ಯತ್ನಿಸಿದರೂ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಇಂಬ್ರಾಹಿಂನನ್ನು ಸ್ಥಳೀಯರು‌ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೇತಾಜಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details