ಕರ್ನಾಟಕ

karnataka

ETV Bharat / state

ಗೂಗಲ್​​ನಿಂದ ಕರೆಗುಡ್ಡದವರಿಗೆ ಪಾದಯಾತ್ರೆ... - Kannada news

ಗೂಗಲ್ ಗ್ರಾಮದಿಂದ ಸಿಎಂ ವಾಸ್ತವ್ಯ ಹೂಡಲಿರುವ ಕರೆಗುಡ್ಡ ಗ್ರಾಮದವರೆಗೆ ಸುಮಾರು 89 ಕಿ.ಮಿ ಪಾದಯಾತ್ರೆ ನಡೆಸಿ, 26 ರಂದು ಗ್ರಾಮ ವಾಸ್ತವ್ಯಕ್ಕೆ ಆಗಮಿಸುವ ಸಿಎಂಗೆ ತಾಲೂಕಿನ ನಾನಾ ಸಮಸ್ಯೆಗಳು, ತಟಸ್ಥವಾದ ಯೋಜನೆಗಳ ಸಮಸ್ಯೆಗಳನ್ನ ಪರಿಹರಿಸುವಂತೆ ಆಗ್ರಹಿಸಿ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಶಾಸಕ ಶಿವನಗೌಡ ನಾಯಕ ತಿಳಿಸಿದ್ದಾರೆ.

ಸಮಸ್ಯೆ ಈಡೇರಿಕೆ ಆಗ್ರಹಿಸಿ ಪಾದಯಾತ್ರೆ

By

Published : Jun 24, 2019, 3:22 PM IST

ರಾಯಚೂರು : ದೇವದುರ್ಗ ತಾಲೂಕಿನ ಜ್ವಲಂತ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಶಾಸಕ ಕೆ. ಶಿವನಗೌಡ ನಾಯಕ ಕರೆಗುಡ್ಡ ಗ್ರಾಮದವರೆಗೆ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.

ಈ ಟಿವಿ ಭಾರತ್ ಜೊತೆ ಮಾತನಾಡಿದ ಕೆ. ಶಿವನಗೌಡ, ಜಿಲ್ಲೆಯ ಗೂಗಲ್ ಗ್ರಾಮದಿಂದ ಸಿಎಂ ವಾಸ್ತವ್ಯ ಹೂಡಲಿರುವ ಕರೆಗುಡ್ಡ ಗ್ರಾಮದವರೆಗೆ ಸುಮಾರು 89 ಕಿ.ಮಿ ಪಾದಯಾತ್ರೆ ನಡೆಸಿ, 26 ರಂದು ಗ್ರಾಮ ವಾಸ್ತವ್ಯಕ್ಕೆ ಆಗಮಿಸುವ ಮುಖ್ಯಮಂತ್ರಿಗಳಿಗೆ ತಾಲೂಕಿನ ನಾನಾ ಸಮಸ್ಯೆಗಳು, ತಟಸ್ಥವಾದ ಯೋಜನೆಗಳ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಪಾದಯಾತ್ರೆ ಅಂತ್ಯಗೊಳಿಸಲಾಗುವುದು ಎಂದರು.

ಸಮಸ್ಯೆ ಈಡೇರಿಕೆ ಆಗ್ರಹಿಸಿ ಪಾದಯಾತ್ರೆ

ಈಗಾಗಲೇ ದೇವದುರ್ಗ ತಾಲೂಕಿಗೆ ನೀಡಿರುವ ಯೋಜನೆಗೆಗಳು ನನೆಗುದ್ದಿಗೆ ಬಿದ್ದಿವೆ. ಅವುಗಳಿಗೆ ಚಾಲನೆ ನೀಡುವಂತೆ ಮನವಿ ಮಾಡಿದ್ರೂ ಸ್ಪಂದಿಸುತ್ತಿಲ್ಲ. ಜೊತೆಗೆ ಬಿಜೆಪಿ ಶಾಸಕರಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು.

ABOUT THE AUTHOR

...view details