ಕರ್ನಾಟಕ

karnataka

ETV Bharat / state

ಕೆಕೆಆರ್​ಡಿಬಿ ಅನುದಾನ ಬಳಕೆ: ರಾಯಚೂರಿನಲ್ಲಿ ಹಿನ್ನಡೆ - ರಾಯಚೂರು ಲೆಟೆಸ್ಟ್​ ನ್ಯೂಸ್

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಆರು ಜಿಲ್ಲೆಗಳಿಗೆ ಸರ್ಕಾರ ಅನುದಾನು ನಿಡುಗಡೆ ಮಾಡುತ್ತದೆ. ಅದರಂತೆ ಜಿಲ್ಲೆಗೂ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಇದನ್ನು ಸರಿಯಾಗಿ ಬಳಕೆ ಮಾಡಿಲ್ಲ ಎನ್ನಲಾಗುತ್ತಿದೆ.

KKRDB grants are not properly used in Raichur
ಕೆಕೆಆರ್​ಡಿಬಿ ಅನುದಾನ ಬಳಕೆಯಲ್ಲಿ ರಾಯಚೂರಿನಲ್ಲಿ ಹಿನ್ನಡೆ

By

Published : Jul 9, 2020, 4:41 PM IST

ರಾಯಚೂರು:ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಬರುವ ಆರು ಜಿಲ್ಲೆಗಳ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಅದು ಸಮರ್ಪಕವಾಗಿ ಜಿಲ್ಲೆಯಲ್ಲಿ ಬಳಕೆಯಾಗಿಲ್ಲ ಎನ್ನಲಾಗುತ್ತಿದೆ.

ಕೆಕೆಆರ್​ಡಿಬಿ ಅನುದಾನ ಬಳಕೆ: ರಾಯಚೂರಿನಲ್ಲಿ ಹಿನ್ನಡೆ

ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಿಗೆ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್​​ಡಿಬಿ)ಯಿಂದ ವಿಶೇಷ ಅನುದಾನ ಒದಗಿಸುತ್ತದೆ. ಇದಕ್ಕಾಗಿ ಆಯಾ ಜಿಲ್ಲೆಗಳಿಂದ ಪ್ರತಿ ವರ್ಷ ಕ್ರಿಯಾ ಯೋಜನೆ ರೂಪಿಸಿದ ಬಳಿಕ ಕಾಮಗಾರಿ ಅನುಸಾರವಾಗಿ ಮಂಡಳಿಯೂ ಅನುದಾನ ಬಿಡುಗಡೆ ಮಾಡುತ್ತದೆ. ಇದನ್ನು ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಮುಗಿಸಿ, ಅಭಿವೃದ್ಧಿ ಕಾರ್ಯಗಳನ್ನು ಸಾಕಾರಗೊಳಿಸಬೇಕು. ಆದರೆ 2013-2014ರಿಂದ 2019-2020 ವರ್ಷಗಳಿಂದ ಬಿಡುಗಡೆಯಾಗಿರುವ ಅನುದಾನ ಸಂಪರ್ಕವಾಗಿ ಬಳಕೆಯಾಗಿಲ್ಲ ಎನ್ನಲಾಗಿದೆ.

ಜಿಲ್ಲೆಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2013-2014ರಿಂದ 2019-2020ನೇ ಸಾಲಿನವರೆಗೆ ಒಟ್ಟು 2,910 ಕಾಮಗಾರಿಗಳಿಗೆ 1,039 ಕೋಟಿ ರೂಪಾಯಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದರಲ್ಲಿ 856 ಕೋಟಿ ರೂ. ಕಾಮಗಾರಿಗೆ ಆದೇಶ ನೀಡಲಾಗಿದ್ದು, 618 ಕೋಟಿ ರೂಪಾಯಿ ಮಾತ್ರ ವ್ಯಯ ಮಾಡಲಾಗಿದೆ. ಈ ಮೂಲಕ 2013-2014ರಿಂದ 2020 ಜೂನ್ 22ರವರೆಗೆ ಶೇ. 59.45ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.

2013-2014ರಿಂದ 2019-2020ನೇ ಸಾಲಿನಲ್ಲಿ ಪ್ರಸಕ್ತ(2020-2021) ಸಾಲಿನಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಐಐಐಟಿ ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಿಸುವುದಕ್ಕೆ ತಾತ್ಕಾಲಿಕವಾಗಿ ಗುರುತಿಸಿರುವ ಯರಮರಸ್ ಎಂಜಿನಿಯರಿಂಗ್, ಐಐಐಟಿ ಪ್ರಾರಂಭಕ್ಕೆ ಮೂಲಭೂತ ಸೌಕರ್ಯಗಳನ್ನ ಒದಗಿಸಲು ಅನುದಾನ ಪಡೆಯಲಾಗಿದೆಯೇ ಹೊರತು ಕಾಮಗಾರಿಗಳು ಆರಂಭಿಸಿಲ್ಲ ಎನ್ನಲಾಗುತ್ತಿದೆ.

ABOUT THE AUTHOR

...view details