ರಾಯಚೂರು : ಕಳೆದ ಅಕ್ಟೋಬರ್ 5ರಂದು ಕಲಬುರ್ಗಿ- ಲಿಂಗಸೂಗೂರು ರಸ್ತೆಯಲ್ಲಿ ಬರುವ ದೇವಾಲಯದ ಹತ್ತಿರ ಕೋಠಾ ಗ್ರಾಮ ಪಿಡಿಒ ಗಜದಂಡಯ್ಯ(51) ಶವ ಪತ್ತೆಯಾಗಿತ್ತು. ಅದು ಕೊಲೆಯಾಗಿದೆ ಎನ್ನುವ ಕುರಿತು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಲಿಂಗಸುಗೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ದೂರಿನ ಆಧಾರ ತನಿಖೆ ವೇಳೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಬಸವರಾಜ ಶೀಲವಂತರ ಹಾಗೂ ರಾಜಪ್ಪ ಶೀಲವಂತರ ಇಬ್ಬರು ಸೇರಿ ಕೊಲೆ ಮಾಡಿರುವುದು ತಿಳಿದು ಬಂದಿದೆ. ಈ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಅಕ್ಟೋಬರ್ 5ರಂದು ಇಬ್ಬರು ಮೊಬೈಲ್ ರಿಪೇರಿ ಮಾಡಿಸಿಕೊಳ್ಳಲು ಬಾಪ್ಪುರಿನಿಂದ ಲಿಂಗಸೂಗೂರಿಗೆ ಬಂದಿದ್ದರು.