ಕರ್ನಾಟಕ

karnataka

ETV Bharat / state

ರಾಜಕೀಯ ಎನ್ನುವುದೇ ಹಿಂಸೆ, ಮಠಾಧೀಶರು ರಾಜಕೀಯ ಮಾಡ್ಬಾರ್ದು .. ಶ್ರೀ ಕೇದಾರನಾಥ ಜಗದ್ಗುರು - shri rawat bhimashankar shivacharya

ಧರ್ಮ ಎಂಬುದು ಅಹಿಂಸೆ, ರಾಜಕೀಯ ಎನ್ನುವುದು ಹಿಂಸೆ. ಹೀಗಾಗಿ ಮಠಾಧೀಶರಾದವರು ರಾಜಕೀಯ ಮಾಡುವುದು ಯೋಗ್ಯವಲ್ಲ ಎಂದು ಕೇದಾರನಾಥ ಜಗದ್ಗುರು ಶ್ರೀರಾವತ್ ಭೀಮಾ ಶಂಕರಲಿಂಗ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇದಾರನಾಥ ಜಗದ್ಗುರು ಶ್ರೀರಾವತ್ ಭೀಮಾಶಂಕರಲಿಂಗ ಶಿವಾಚಾರ್ಯರು

By

Published : Sep 8, 2019, 3:35 PM IST

ರಾಯಚೂರು :ಮಠಾಧೀಶರು ರಾಜಕಾರಣ ಮಾಡದೆ, ಧರ್ಮ ಸಂಘಟನೆಯಲ್ಲಿ ತೊಡಗಬೇಕೆಂದು ಕೇದಾರನಾಥ ಜಗದ್ಗುರು ಶ್ರೀರಾವತ್ ಭೀಮಾ ಶಂಕರಲಿಂಗ ಶಿವಾಚಾರ್ಯರು ಹೇಳಿದ್ದಾರೆ.

ಕೇದಾರನಾಥ ಜಗದ್ಗುರು ಶ್ರೀರಾವತ್ ಭೀಮಾಶಂಕರಲಿಂಗ ಶಿವಾಚಾರ್ಯರು..

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ಎನ್ನುವುದು ಅಹಿಂಸೆ, ರಾಜಕೀಯ ಎನ್ನುವುದು ಹಿಂಸೆ. ಹೀಗಾಗಿ ಮಠಾಧೀಶರಾದವರು ರಾಜಕೀಯ ಮಾಡುವುದು ಯೋಗ್ಯವಲ್ಲ. ವೀರಶೈವ,ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಕುರಿತಂತೆ ಪೇಜಾವರ ಶ್ರೀಗಳಿಗೆ ಪ್ರತಿಕ್ರಿಯೆಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅಲ್ಲದೇ ಬೇರೆಯವರು ಮಾತನಾಡಿದ್ದಾರೆ ಎನ್ನುವುದಕ್ಕಿಂತ ನಾವು ಜಾಗೃತರಾಗಬೇಕೆಂದು ಹೇಳಿದರು.

ABOUT THE AUTHOR

...view details