ಕರ್ನಾಟಕ

karnataka

ETV Bharat / state

ಬೀದರ್​ ಹಾಸ್ಟೆಲ್​ ವಿದ್ಯಾರ್ಥಿನಿಯರ ಮೇಲಿನ ಹಲ್ಲೆ ಪ್ರಕರಣ: ಸೂಕ್ತ ಕ್ರಮಕ್ಕೆ ಆದೇಶ - raichur news

ರಾಯಚೂರು ಜಿಲ್ಲಾ ಪಂಚಾಯತ್​ ಜಲನಿರ್ಮಲ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ದಾಖಲಾದ ದೂರುಗಳ ವಿಚಾರಣಾ ಸಭೆ ನಡೆಯಿತು. ಈ ವೇಳೆ ಬೀದರ್​ ಜಿಲ್ಲೆಯ ಹಾಸ್ಟೆಲ್​ವೊಂದರಲ್ಲಿ ​ ವಿದ್ಯಾರ್ಥಿನಿಯರ ಮೇಲಿನ ಹಲ್ಲೆ ಪ್ರಕರಣದ ವಿಷಯ ಪ್ರಸ್ತಾಪವಾಯಿತು.

karnataka-state-child-rights-protection-commission-meeting-in-raichur
ಬೀದರ್​ನ ಹಾಸ್ಟೆಲ್​ ವಿದ್ಯಾರ್ಥಿನಿಯರ ಮೇಲೆ ನಡೆದ ದೈಹಿಕ ಹಲ್ಲೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ: ಆಂತೋಣಿ ಸೆಬಾಸ್ಟಿಯನ್

By

Published : Nov 28, 2019, 3:36 PM IST

ರಾಯಚೂರು:ನಗರದ ಜಿಲ್ಲಾ ಪಂಚಾಯತ್​ ಜಲನಿರ್ಮಲ ಸಭಾಂಗಣದಲ್ಲಿ ಇಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ದಾಖಲಾದ ದೂರುಗಳ ವಿಚಾರಣಾ ಸಭೆ ನಡೆಯಿತು.

ಬೀದರ್​ನ ಹಾಸ್ಟೆಲ್​ ವಿದ್ಯಾರ್ಥಿನಿಯರ ಮೇಲಿನ ಹಲ್ಲೆ ಪ್ರಕರಣ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೆಂಡಾಮಂಡಲ

ಈ ಸಭೆಯಲ್ಲಿ ಬೀದರ್​ ಜಿಲ್ಲೆಯ ವಸತಿ ನಿಲಯವೊಂದರಲ್ಲಿ ವಿದ್ಯಾರ್ಥಿನಿಯರ ಮೇಲಿನ ಹಲ್ಲೆ ಹಾಗೂ ಹಾಸ್ಟೆಲ್​ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿನಿಯರು ದೂರು ನೀಡಿದ್ದರು. ಆದರೆ, ಹಾಸ್ಟೆಲ್​ ಅಧಿಕಾರಿಗಳು ಇದನ್ನು ಮುಚ್ಚಿಹಾಕಲು ಇಂತಹ‌ ಘಟನೆ ಘಟನೆ ನಡೆದಿಲ್ಲವೆಂದು ವಿದ್ಯಾರ್ಥಿಗಳ ಹೆಸರಿನಲ್ಲಿ ಪತ್ರ ಬರೆಸಿದ್ದರು. ಈ ವಿಷಯ ತಿಳಿದು ಆಕ್ರೋಶಗೊಂಡ ಆಯೋಗದ ಅಧ್ಯಕ್ಷ ಆಂತೋಣಿ ಸೆಬಾಸ್ಟಿಯನ್, ಸದಸ್ಯೆ ಡಾ. ಜಯಶ್ರೀ ಹಾಗೂ ಇತರೆ ಸದಸ್ಯರು ಪತ್ರ ಹಿಡಿದು ಅಧಿಕಾರಿಗಳ ವಿರುದ್ಧ ಗರಂ ಆದರು.

ಸಭೆಯಲ್ಲಿ ಇದರ ಬಗ್ಗೆ ಸಬೂಬು ನೀಡಲು‌ ಮುಂದಾದ ಅಧಿಕಾರಿಗಳ ವಿರುದ್ಧ ನಿಮ್ಮ ಈ ಕಾರ್ಯ ಕ್ಷಮಿಸಲು ಅನರ್ಹ. ಇದರ ಬಗ್ಗೆ ಸಮಜಾಯಿಷಿ ನೀಡಲು ನಾವೇನು ಜೋಕರ್ ಅಲ್ಲ. ನೀವು ಜೋಕರ್ ಥರ ಆಡಬೇಡಿ. ನಿಜಾ ಹೇಳದಿದ್ದರೆ, ತನಿಖೆ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತೆ ಎಂದು ಎಚ್ಚರಿಸಿದರು. ನಂತರ ಈ ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕಾದೀತು ಎಂದು ಎಚ್ಚರಿಕೆ ಕೊಟ್ಟರು.

ABOUT THE AUTHOR

...view details