ರಾಯಚೂರು:ಜಿಲ್ಲೆಯಲ್ಲಿಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ಸಲುವಾಗಿ ಇತಿಹಾಸ ಪ್ರಸಿದ್ಧ ಕಲ್ಮಲಾ ಶ್ರೀಕರಿಯಪ್ಪ ತಾತಾ ಜಾತ್ರಾ ಮಹೋತ್ಸವವನ್ನು ಸರ್ಕಾರ ರದ್ದುಗೊಳಿಸಿದೆ.
ಇತಿಹಾಸ ಪ್ರಸಿದ್ದ ಕಲ್ಮಲಾ ಕರಿಯಪ್ಪ ತಾತಾ ಜಾತ್ರಾ ಮಹೋತ್ಸವ ರದ್ದು
ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸದ ನಿಯಂತ್ರಣಕ್ಕೆ ಮುಂದಾದ ಸರ್ಕಾರ ಇದೀಗ ಇತಿಹಾಸ ಪ್ರಸಿದ್ಧ ಕಲ್ಮಲಾ ಶ್ರೀಕರಿಯಪ್ಪ ತಾತಾ ಜಾತ್ರಾ ಮಹೋತ್ಸವ ರದ್ದುಗೊಳಿಸಿದೆ.
ಕಲ್ಮಲಾ ಕರಿಯಪ್ಪ ತಾತಾ
ಹೀಗಾಗಿ ಜು. 24 ರಿಂದ 25 ರವರೆಗೆ ನಡೆಯಬೇಕಾದ ಜಾತ್ರಾ ಮಹೋತ್ಸವ ರದ್ದುಗೊಳಿಸಿ ದೇವಸ್ಥಾನದ ಆಡಳಿತ ಮಂಡಳಿ, ಆಡಳಿತಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.
ಆದ್ರೆ ಕೋವಿಡ್-19 ಸಾಂಕ್ರಾಮಿಕ ರೋಗದ ಹತೋಟಿ ತರುವುದಕ್ಕೆ ಜಾತ್ರೆಯನ್ನ ರದ್ದುಗೊಳಿಸಲಾಗಿದ್ದು, ಭಕ್ತರು ಸಹಕರಿಸಬೇಕಾಗಿ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.