ಲಿಂಗಸುಗೂರು (ರಾಯಚೂರು):ಭಾರತದ ಭಾಷಾ ನೀತಿಯನ್ನು ಮರುಪರಿಶೀಲಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಲಿಂಗಸುಗೂರಲ್ಲಿ ಪ್ರತಿಭಟನೆ ನಡೆಸಿದರು.
ಭಾರತ ಬಹುಭಾಷೆ, ಸಂಸ್ಕೃತಿ, ಧರ್ಮ ಒಳಗೊಂಡ ಐಕ್ಯತೆಯ ದೇಶವಾಗಿದೆ. ಸಂವಿಧಾನಾತ್ಮಕ ಭಾಷೆಗಳನ್ನು ವಿಭಜಿಸಿ ಹಿಂದಿ, ಇಂಗ್ಲೀಷ ಭಾಷೆಯೇತರರ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ಹಿಂದಿ ರಾಷ್ಟ್ರೀಯ ಭಾಷೆಯಾಗಿ ಒತ್ತಾಯಪೂರ್ವಕ ಹೇರಿಕೆ ಸಲ್ಲದು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಸಂವಿಧಾನಾತ್ಮಕವಾಗಿ ಭಾರತಕ್ಕೆ ಯಾವುದೇ ರಾಷ್ಟ್ರ ಭಾಷೆ ಇಲ್ಲ. 22 ಭಾಷೆಗಳನ್ನು ಸಮಾನಾಂತರವಾಗಿ ಕಾಣಬೇಕು. ಹಿಂದಿ ಭಾಷೆ ದಿನವಾಗಿ ಆಚರಿಸಲು ಮುಂದಾದ ಕೇಂದ್ರ ಸರ್ಕಾರ, ರಾಷ್ಟ್ರದ ತುಂಬೆಲ್ಲಾ ಹಿಂದಿ ಒಂದೇ ಭಾಷೆ ಉಳಿಸುವ ಕುತಂತ್ರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿ ದಿವಸ, ಹಿಂದಿ ಸಪ್ತಾಹ, ಪಕ್ವಾಡಾ ಎಂಬಿತ್ಯಾದಿ ಕಾರ್ಯಕ್ರಮಗಳ ಮೂಲಕ ಒತ್ತಾಯದ ಹಿಂದಿ ಹೇರಿಕೆ ಬಿಡಬೇಕು. ದಕ್ಷಿಣ ಭಾರತದ ರಾಜ್ಯಗಳ ಜನರ ಮೇಲೆ ಭಾಷೆ ಹೆಸರಲ್ಲಿ ನಡೆಯುವ ದೌರ್ಜನ್ಯ ತಡೆಯುವಂತೆ ಕರವೇ ಅಧ್ಯಕ್ಷ ಜಿಲಾನಿ ಪಾಷ ಒತ್ತಾಯಿಸಿದರು.