ರಾಯಚೂರು : ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ(ಅಕವಿಮ)ದ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ ಪಿ ನಂಜುಂಡಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಅಕವಿಮ ಜಿಲ್ಲಾ ಘಟಕದಿಂದ ಒತ್ತಾಯಿಸಿದೆ.
ಎಂಎಲ್‌ಸಿ ಕೆ ಪಿ ನಂಜುಂಡಿಯವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ.. - K. P. Nanjundi
ವಿಧಾನ ಪರಿಷತ್ ಸದಸ್ಯ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ ಪಿ ನಂಜುಂಡಿಯವರಿಗೆ ಸಚಿವ ಸ್ಥಾನ ನೀಡುವಂತೆ ಅಕವಿಮ ಜಿಲ್ಲಾ ಘಟಕ ಒತ್ತಾಯಿಸಿದೆ.
ಅ.ಕ.ವಿ.ಮ ಜಿಲ್ಲಾ ಘಟಕ
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಯುವ ಅಧ್ಯಕ್ಷ ಎಸ್.ರವೀಂದ್ರಕುಮಾರ, ವಿಶ್ವಕರ್ಮ ಸಮಾಜದ ಕೆ ಪಿ ನಂಜುಂಡಿ ಅವರು ಸುಮಾರು ವರ್ಷಗಳಿಂದ ಮೈಸೂರಿನಿಂದ-ಬೆಂಗಳೂರಿನವರೆಗೆ ಹಾಸನದಿಂದ-ಬೇಲೂರುವರೆಗೆ ಪಾದಯಾತ್ರೆ ಮಾಡುವ ಮೂಲಕ ಸಂಘಟನೆಯನ್ನು ಕಟ್ಟುತ್ತಾ ಬಂದಿದ್ದಾರೆ.
ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕಿಂತ ಅಧಿಕ ಜನ ಮತ್ತು 67 ಮಠಾಧಿಪತಿಗಳು ಹಾಗೂ ಸಮಾಜದ ಬಾಂಧವರು ಕೆ ಪಿ ನಂಜುಂಡಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದಲ್ಲಿ ಜಿಲ್ಲಾ ಮಟ್ಟದಿಂದ ಪಾದಯಾತ್ರೆ ಮಾಡುವುದಾಗಿ ಎಚ್ಚರಿಕೆ ನೀಡಿದರು.