ರಾಯಚೂರು:ಕಾರ್ಮಿಕರಿಗೆ ನೀಡುವ ಸಕಲ ಕಾರ್ಮಿಕರ ಸೌಲಭ್ಯಗಳ ಕುರಿತ ದೂರುಗಳನ್ನು ಆಲಿಸಲು 24/7 ಸೆಂಟರ್ ತೆರೆಯಲಾಗುವುದು ಹಾಗೂ ಪಿಎಫ್, ಇಎಸ್ಐ ಸೌಲಭ್ಯ ಕಲ್ಪಿಸಲು ಸಕಲ ವ್ಯವಸ್ಥೆ ಮಾಡಿ ಬಾಲ ಕಾರ್ಮಿಕ ಪದ್ಧತಿಯನ್ನು ವಿವಿಧ ಇಲಾಖಾಧಿಕಾರಿಗಳನ್ನು ವ್ಯವಸ್ಥಿತ ಸಂಯೋಜನೆ ಮಾಡುವ ಮೂಲಕ ತಡೆಯಲಾಗುವುದು ಎಂದು ಕಾರ್ಮಿಕ ಇಲಾಖೆಯ ರಾಜ್ಯ ಕಾರ್ಯದರ್ಶಿ ಕ್ಯಾ. ಮಣಿವಣ್ಣನ್ ತಿಳಿಸಿದ್ದಾರೆ.
ಕಾರ್ಮಿಕರ ದೂರುಗಳನ್ನು ಆಲಿಸಲು 24x7 ಸೆಂಟರ್ ತೆರೆಯಲಾಗುವುದು:ಕ್ಯಾ. ಮಣಿವಣ್ಣನ್ - ಕಾರ್ಮಿಕರ ಕುಂದು ಕೊರತೆ
ಕಾರ್ಮಿಕರಿಗೆ ನೀಡುವ ಸಕಲ ಕಾರ್ಮಿಕರ ಸೌಲಭ್ಯಗಳ ಕುರಿತ ದೂರುಗಳನ್ನು ಆಲಿಸಲು 24/7 ಸೆಂಟರ್ ತೆರೆಯಲಾಗುವುದು ಹಾಗೂ ಪಿಎಫ್, ಇಎಸ್ಐ ಸೌಲಭ್ಯ ಕಲ್ಪಿಸಲು ಸಕಲ ವ್ಯವಸ್ಥೆ ಕಲ್ಪಿಸಲಾಗುವುದು. ಬಾಲ ಕಾರ್ಮಿಕ ಪದ್ಧತಿ ತಡೆಗೆ ವಿವಿಧ ಇಲಾಖಾಧಿಕಾರಿಗಳನ್ನು ವ್ಯವಸ್ಥಿತ ಸಂಯೋಜನೆ ಮಾಡುವ ಮೂಲಕ ತಡೆಯಲಾಗುವುದು ಎಂದು ಕಾರ್ಮಿಕ ಇಲಾಖೆಯ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ತಿಳಿಸಿದ್ದಾರೆ.
ಕಾರ್ಮಿಕರ ಕುಂದುಕೊರತೆ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬಾಲ ಕಾರ್ಮಿಕ ತಡೆಗೆ ಕಾರ್ಮಿಕ ಇಲಾಖೆ, ಪೊಲೀಸ್ಇಲಾಖೆ, ಶಿಕ್ಷಣ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ವ್ಯವಸ್ಥಿತ ಯೋಜನೆ ರೂಪಿಸಲಾಗುವುದು ಎಂದರು.
ಜಿಲ್ಲೆಯಲ್ಲಿನ ಕಾರ್ಮಿಕ ಇಲಾಖೆಯ ಸಿಬ್ಬಂದಿ ಕೊರತೆ ನೀಗಿಸಲು ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು. ಅಲ್ಲದೇ ಕಾರ್ಮಿಕ ಹಾಗೂ ಪಿಎಫ್ ಕಚೇರಿ ಚಿಕ್ಕದಿರುವ ಕಾರಣ ನೂತನ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಲಾಗುವುದು ಎಂದಿದ್ದು, ಕಾರ್ಮಿಕರಿಗೆ ಇಎಸ್ಐ ಸೌಲಭ್ಯ ಕಲ್ಪಿಸಲು ಪ್ರತಿ ತಾಲೂಕಿನ ಆಯ್ದ 3 ಆಸ್ಪತ್ರೆ ಟೈ ಅಪ್ ಮಾಡಲಾಗುವುದು ಹಾಗೂ ಕಾರ್ಮಿಕರ ಸಮಗ್ರ ಸಮಸ್ಯೆ ಆಲಿಸಲು ಆಯಾ ಅಧಿಕಾರಿಗಳಿಂದ ಮಾಹಿತಿ ಪಡೆದು ಬಗೆಹರಿಸಲಾಗುವುದು ಎಂದು ಕ್ಯಾ. ಮಣಿವಣ್ಣನ್ ಮಾಹಿತಿ ನೀಡಿದರು.