ಕರ್ನಾಟಕ

karnataka

ETV Bharat / state

ಮಾನಸಿಕ ಆರೋಗ್ಯ ಕಾಪಾಡಲು ವೈದ್ಯರ ಸಲಹೆ ಪಡೆಯಿರಿ: ನ್ಯಾ. ಮುಸ್ತಫಾ ಹುಸೇನ್‌ - mental health care issue

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ 21ನೇ ವಿಶ್ವ ದೃಷ್ಟಿ ದಿನಾಚರಣೆ ಜಾಥಾಕ್ಕೆ ಜಿಲ್ಲಾ ನ್ಯಾಯಾಧೀಶ ಮುಸ್ತಫಾ ಹುಸೇನ್ ಚಾಲನೆ ನೀಡಿದರು.

judge-mustafa-hussain-talk-about-mental-health-care-issue
ಮಾನಸಿಕ ಆರೋಗ್ಯ ಕಾಪಾಡಲು ವೈದ್ಯರ ಸಲಹೆ ಪಡೆಯಿರಿ: ನ್ಯಾ.ಮುಸ್ತಫಾ ಹುಸೇನ್‌

By

Published : Oct 9, 2020, 3:46 PM IST

ರಾಯಚೂರು:ಇತ್ತೀಚೆಗೆ ಕೆಲವರು ಸಣ್ಣ-ಸಣ್ಣ ವಿಷಯಗಳಿಗೂ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಾನಸಿಕ ಆರೋಗ್ಯ ಕಾಪಾಡಲು ವೈದ್ಯರ ಸಲಹೆ ಪಡೆಯಬೇಕು ಎಂದು ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಹುಸೇನ್ ಹೇಳಿದರು.

ಮಾನಸಿಕ ಆರೋಗ್ಯ ಕಾಪಾಡಲು ವೈದ್ಯರ ಸಲಹೆ ಪಡೆಯಿರಿ: ನ್ಯಾ.ಮುಸ್ತಫಾ ಹುಸೇನ್‌

ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್​ ಹಾಗೂ ಇತರ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ, ಹಾಗೂ 21ನೇ ವಿಶ್ವ ದೃಷ್ಟಿ ದಿನಾಚರಣೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯವೇ ಮಹಾಭಾಗ್ಯ. ಸದಾ ನಾವು ಆರೋಗ್ಯದಿಂದ ಇದ್ದರೆ ಯಾವುದೇ ರೋಗಗಳು ಹತ್ತಿರ ಬರುವುದಿಲ್ಲ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ಜಾಗೃತರಾಗಬೇಕಾಗಿದೆ. ಅದೇ ರೀತಿ ಕಣ್ಣಿನ ಬಗ್ಗೆ ಯಾರೂ ನಿಷ್ಕಾಳಜಿ ವಹಿಸಬೇಡಿ, ಕಣ್ಣಿನ ಸಮಸ್ಯೆ ಬಂದಲ್ಲಿ ವೈದರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ABOUT THE AUTHOR

...view details