ರಾಯಚೂರು: ಸಂವಿಧಾನ ರಚನೆ ಹಿಂದೆ ಅನೇಕ ಮಹನೀಯರ ತ್ಯಾಗವಿದ್ದು, ಅದನ್ನು ಒಂದು ಪುಸ್ತಕ ಎಂದು ಭಾವಿಸದೆ ಸಾಮಾಜಿಕ ನ್ಯಾಯದ ಭದ್ರ ಬುನಾದಿ ಎಂದು ತಿಳಿಯಬೇಕು ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧಿಶರಾದ ಎಸ್.ಎ.ಮುಸ್ತಫ ಹುಸೇನ್ ಅಭಿಮತ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶದ ಇತಿಹಾಸದಲ್ಲಿ ಸಂವಿಧಾನ ರಚನೆ ಬಹಳ ಮಹತ್ವದಾಗಿದ್ದು, ಸಂವಿಧಾನದ ಪ್ರತಿಯನ್ನು ಕೇವಲ ಪುಸ್ತಕವನ್ನಾಗಿ ನೋಡದೆ ಅದರ ರಚನೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.