ಕರ್ನಾಟಕ

karnataka

ETV Bharat / state

ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ಜಪಾನಂದಾಜೀ, ಸುಧಾಮೂರ್ತಿ - North Karnataka Flood

ಪ್ರತಿ ಹಂತದಲ್ಲಿ 1,500 ಜನರಿಗೆ ಪರಿಹಾರ ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಪರಿಹಾರದ ಕಿಟ್​​​ನಲ್ಲಿ ಅಕ್ಕಿ, ಗೋಧಿ, ಸಕ್ಕರೆ, ಎಣ್ಣೆ, ಸೇರಿದಂತೆ ದಿನಸಿ ಹಾಗೂ ಪುರುಷ, ಮಹಿಳೆಯರಿಗೆ ಪ್ರತ್ಯೇಕ ಬಟ್ಟೆ, ಪಾತ್ರೆ ಸಾಮಗ್ರಿಗಳನ್ನು ನೀಡಲು ನಿರ್ಧರಿಸಿದ್ದಾರೆ.

japandaji
ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಾಜೀ

By

Published : Oct 8, 2020, 5:29 PM IST

ರಾಯಚೂರು: ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ರಾಮಕೃಷ್ಣ ಸೇವಾಶ್ರಮ ಹಾಗೂ ಸುಧಾಮೂರ್ತಿಯವರ ಇನ್ಫೋಸಿಸ್ ಫೌಂಡೇಶನ್, ಭಾರತೀಯ ರೆಡ್ ಕ್ರಾಸ್ ಸಹಯೋಗದಲ್ಲಿ ರಾಯಚೂರು ಮತ್ತು ಜೇವರ್ಗಿ ತಾಲೂಕಿನ ಆಯ್ದ ಪ್ರದೇಶದಲ್ಲಿ ಪ್ರವಾಹ ಪರಿಹಾರ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಾಜೀ ತಿಳಿಸಿದ್ದಾರೆ.

ನಗರದ ಮಾಧ್ಯಮ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ರಾಯಚೂರು ಮತ್ತು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗ್ರಾಮಗಳ ಸ್ಥಿತಿ ಶೋಚನೀಯವಾಗಿದೆ.

ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಾಜೀ ಸುದ್ದಿಗೋಷ್ಠಿ

ಪ್ರತಿ ಹಂತದಲ್ಲಿ 1,500 ಜನರಿಗೆ ಪರಿಹಾರ ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಸಂತ್ರಸ್ತರ ಕಷ್ಟ ಆಲಿಸುವೆ. ಪರಿಹಾರದ ಕಿಟ್​​​​ನಲ್ಲಿ ಅಕ್ಕಿ, ಗೋಧಿ, ಸಕ್ಕರೆ, ಎಣ್ಣೆ, ಸೇರಿದಂತೆ ಆಹಾರ ದಿನಸಿ ಹಾಗೂ ಪುರುಷ, ಮಹಿಳೆಯರಿಗೆ ಪ್ರತ್ಯೇಕ ಬಟ್ಟೆ, ಪಾತ್ರೆ ಸಾಮಗ್ರಿಗಳನ್ನು ನೀಡಲಾಗುವುದು ಎಂದರು.

ಗ್ರಾಮಾಂತರ ಪ್ರದೇಶಗಳಾದ ಇಡಪನೂರು, ಪಿಂಡಗಲದಿನ್ನಿ, ತಲಮಾರಿ, ಮಿರ್ಜಾಪುರ, ಮಿರಪೂರ, ಜಂಬಲದಿನ್ನಿ, ಗುಜಹಳ್ಳಿ, ಗೊನಾವಾರ ಸೇರಿದಂತೆ ನಗರ ಪ್ರದೇಶಗಳಾದ ಜಲಾಲ ನಗರ, ಎಲ್‌ಬಿಎಸ್ ನಗರ, ಹರಿಜನವಾಡ, ಸಿಯಾತಲಾಬ್, ಝಹಿರಾಬಾದ್, ದೇವಿನಗರ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details