ರಾಯಚೂರು :ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಅಕ್ರಮ ಮರಳು ಮಾಫಿಯಾದ ಟಿಪ್ಪರ್ಗಳು ಮಾತ್ರ ಯಾವುದೇ ಕರ್ಫ್ಯೂ ಬಗ್ಗೆ ತಲೆ ಕೆಡಿಸಿಕೊಳ್ಳದೆ ರಾಜಾರೋಷವಾಗಿ ಓಡಾಡುತ್ತಿದ್ದವು.
ಜನತಾ ಕರ್ಫ್ಯೂ ದಿನವೂ ನಿಲ್ಲದ ಅಕ್ರಮ ಮರಳು ಲಾರಿಗಳ ಓಡಾಟ.. - coronavirus updates
ಇಂದು ಜಿಲ್ಲೆಯಾದ್ಯಂತ ಜನರು ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿ ಸಂಪೂರ್ಣ ಬಂದ್ ಮಾಡಿದ್ದರೂ ಅಕ್ರಮ ಮರಳು ಸಾಗಾಟ ಮಾತ್ರ ನಡೆಯುತ್ತಲೇ ಇದೆ.
ಅಕ್ರಮ ಮರಳು ಲಾರಿಗಳ ಓಡಾಟ
ಲಿಂಗಸುಗೂರ ತಾಲೂಕಿನಲ್ಲಿ ಹೊಸ ಮರಳು ನೀತಿ ಉಲ್ಲಂಘಿಸಿ ಹಗಲು ರಾತ್ರಿ ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಇಂದು ಜಿಲ್ಲೆಯಾದ್ಯಂತ ಜನರು ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿ ಸಂಪೂರ್ಣ ಬಂದ್ ಮಾಡಿದ್ದರೂ ಅಕ್ರಮ ಮರಳು ಸಾಗಾಟ ಮಾತ್ರ ನಡೆಯುತ್ತಲೇ ಇದೆ.
ಹೀಗಾಗಿ ಅಕ್ರಮ ದಂಧೆ ತಡೆಗಟ್ಟಲು ವಿಫಲವಾದ ಜಿಲ್ಲಾಡಳಿತಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.