ರಾಯಚೂರು: ಬರಪೀಡಿತ ಜಿಲ್ಲೆಗಳ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಶಾಶ್ವತ ನೀರು ಕಲ್ಪಿಸಲು ಜಲಧಾರೆ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಉಪಯೋಗವನ್ನು ರಾಯಚೂರು ಜಿಲ್ಲೆಯೂ ಪಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಗೆ ಜಲಧಾರೆ ಯೋಜನೆ: ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವರು - undefined
ರಾಯಚೂರು, ವಿಜಯಪುರ, ಮಂಡ್ಯ, ಕೋಲಾರ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಲಧಾರೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ವಿಷಯವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

ನಗರದಲ್ಲಿರುವ ಸರ್ಕೀಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನದಿ ಹಾಗೂ ಡ್ಯಾಂ ಮೂಲಕ ನೀರು ಕೊಡಲು ಯೋಜನೆ ರೂಪಿಸಲಾಗಿದೆ. ಆ ಮೂಲಕ ಶಾಶ್ವತ ಬರ ನಿರ್ವಹಣೆಗೆ ಉದ್ದೇಶಿಸಲಾಗಿದ್ದು, ಮೊದಲನೇ ವರ್ಷದ ಅನುಷ್ಠಾನಕ್ಕಾಗಿ ರಾಯಚೂರು, ವಿಜಯಪುರ, ಮಂಡ್ಯ, ಕೋಲಾರ ಜಿಲ್ಲೆಗಳನ್ನು ಆಯ್ಕೆ ಮಾಡಿ ಯೋಜನೆಗೆ ನೀಲನಕ್ಷೆ ತಯಾರಿಸಲಾಗಿದೆ. ರಾಯಚೂರು ಜಿಲ್ಲೆಗೆ ಜಲಧಾರೆ ಯೋಜನೆಗಾಗಿ 1,300 ಕೋಟಿ ವೆಚ್ಚವಾಗಲಿದೆ ಎಂದರು.
ಇನ್ನು, ಕೇಂದ್ರದ ಬಜೆಟ್ ಕುರಿತು ಮಾತನಾಡಿದ ಅವರು, ಈ ಹಿಂದೆ ಕೇಂದ್ರದಿಂದ ಕುಡಿಯುವ ನೀರಿಗೆ ಒಟ್ಟು ವೆಚ್ಚದಡಿ ಶೇಕಡಾ 75ರಷ್ಟು ಅನುದಾನ ನೀಡಲಾಗುತಿತ್ತು. ಆದರೆ, ಈಗ ಶೇಕಡಾ 12 ಮಾತ್ರ ನೀಡುತ್ತಿದೆ. ನರೇಗಾ ಯೋಜನೆಯಡಿ ₹ 1.5 ಸಾವಿರ ಕೋಟಿ ಅನುದಾನ ಉಳಿಸಿಕೊಂಡಿದೆ ಹಾಗೂ ಗ್ರಾಮೀಣ ಸಡಕ್ ಯೋಜನೆಯಡಿ ಯಾವುದೇ ರಸ್ತೆ ನಿರ್ಮಾಣ ಮಾಡಿಲ್ಲ ಇದರ ಕಡೆ ಗಮನಹರಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.