ಕರ್ನಾಟಕ

karnataka

ETV Bharat / state

ಕೆರೆ ಅಭಿವೃದ್ಧಿಗೆ ಮುಂದಾದ ಜೈನ ಸಂಘಟನೆ... 12 ಕೆರೆಗಳ ಹೂಳೆತ್ತುವ ಕಾರ್ಯ!

ಜಿಲ್ಲೆಯ 12 ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಜೈನ ಸಮುದಾಯ ಸಂಘಟನೆ ಮುಂದಾಗಿದ್ದು, ಕೆಲ ತಿಂಗಳಿನಿಂದ ಕಾರ್ಯ ಆರಂಭಿಸಿದೆ.

ಜೈನ್ ಸಂಘಟನೆಯಿಂದ ಕರೆಗಳ ಹೊಳ್ಳುತ್ತವ ಕಾರ್ಯ

By

Published : Jun 4, 2019, 10:26 AM IST

ರಾಯಚೂರು:ಭಾರತೀಯ ಜೈನ ಸಮುದಾಯ ಸಂಘಟನೆಯಿಂದ ಜಿಲ್ಲಾದ್ಯಂತ ಕೆರೆಗಳ ಹೊಳೆತ್ತುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

ಜಿಲ್ಲೆಯ 12 ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಜೈನ ಸಮುದಾಯ ಸಂಘಟನೆ ಮುಂದಾಗಿದ್ದು, ಕೆಲ ತಿಂಗಳಿನಿಂದ ಕಾರ್ಯ ಆರಂಭಿಸಿದೆ. ಈ ಕಾರ್ಯಕ್ಕೆ ಸರಕಾರದಿಂದ ಜೆಸಿಬಿ ಯಂತ್ರಗಳಿಗೆ ಡೀಸೆಲ್​​ ಸೌಲಭ್ಯ ಕಲ್ಪಿಸುತ್ತಿದ್ದು, ಜೈನ ಸಮುದಾಯದಿಂದ ಜೆಸಿಬಿ ಯಂತ್ರಗಳನ್ನು ಬಳಕೆ ಮಾಡಿಕೊಳ್ಳುತ್ತದೆ. ಇನ್ನು ಖಾಸಗಿ ಶಿಲ್ಪಾ ಫೌಂಡೇಶನ್ ಸಿ.ಎಸ್.ಆರ್. ಅನುದಾನದಡಿಯಲ್ಲಿ ನೆರವು ಪಡೆದುಕೊಂಡು ಕೆರೆಯಲ್ಲಿ ಮಣ್ಣು ತೆಗೆಯಲಾಗುತ್ತಿದೆ.

ಜೈನ ಸಂಘಟನೆಯಿಂದ ಕೆರೆಗಳ ಹೊಳ್ಳುತ್ತವ ಕಾರ್ಯ

12 ಕೆರೆಗಳ ಪೈಕಿ ಸದ್ಯ 8 ಕೆರೆಗಳಲ್ಲಿ ಕಾರ್ಯ ಭರದಿಂದ ಸಾಗಿದೆ. ಕೆರೆಯ ಹೂಳೆತ್ತಿದ್ದ ಮಣ್ಣನ್ನು ರೈತರಿಗೆ ಉಚಿತವಾಗಿ ನಿಡಲಾಗುತ್ತಿದೆ. ಇನ್ನು ಮಳೆಗಾಲದ ಒಳಗಡೆ ಈ ಕಾರ್ಯ ಮುಗಿಸುವುದಕ್ಕೆ ಎಲ್ಲಾ ರೀತಿಯಲ್ಲಿ ಯೋಜನೆ ರೂಪಿಸಿದ್ದು, ಆದಷ್ಟು ಬೇಗ ಹೂಳೆತ್ತುವ ಕಾರ್ಯವನ್ನು ಮುಗಿಸಲು ವೇಗದ ಕಾಮಗಾರಿ ನಡೆಸಲಾಗುತ್ತಿದೆ ಎಂದು ಜೈನ ಸಮುದಾಯದ ಮುಖಂಡರು ಹೇಳಿದರು.

ABOUT THE AUTHOR

...view details