ರಾಯಚೂರು/ಮಂತ್ರಾಲಯ: ರಾಜ್ಯಸಭೆಯ ನೂತನ ಸದಸ್ಯರಾಗಿ ಆಯ್ಕೆಯಾದ ನಟ ಜಗ್ಗೇಶ ಅವರು ಪತ್ನಿ ಪರಿಮಳ ಅವರೊಂದಿಗೆ ಭಾನುವಾರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದರು. ಶ್ರೀಮಠಕ್ಕೆ ಆಗಮಿಸಿ ಜಗ್ಗೇಶ್ ಮೊದಲಿಗೆ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದುಕೊಂಡು, ವಿಶೇಷ ಪೂಜೆ ನೇರವೇರಿಸಿದರು.
ಇದಾದ ಬಳಿಕ ಮಠದ ಪೀಠಾಧಿಪತಿ ಶ್ರೀಸುಬುದೇಂಧ್ರ ತೀರ್ಥರ ಆಶೀರ್ವಾದ ಪಡೆದುಕೊಂಡು, ಕುಶಲೋಪರಿ ವಿಚಾರಿಸಿದರು. ಈ ವೇಳೆ ಪೀಠಾಧಿಪತಿಗಳು ಸನ್ಮಾನಿಸಿ ಜಗ್ಗೇಶ್ ಅವರಿಗೆ ಆಶೀರ್ವದಿಸಿದರು.