ಕರ್ನಾಟಕ

karnataka

ETV Bharat / state

ಪಕ್ಷದ ಹೈಕಮಾಂಡ್​​ ತೀರ್ಮಾನದಂತೆ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ: ಶ್ರೀರಾಮುಲು

ಮೂರೂವರೆ ವರ್ಷಗಳ ಕಾಲ ಬಿಜೆಪಿ ಸರ್ಕಾರ ರಾಜ್ಯದಲ್ಲಿ‌ ಆಡಳಿತ ನಡೆಸುತ್ತದೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಚುನಾವಣೆಯಲ್ಲಿ ಸೋಲುಂಡಿರುವ ಲಕ್ಷ್ಮಣ ಸವದಿಗೆ ಬಿಜೆಪಿ  ಸಚಿವ ಸ್ಥಾನ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಗೆದ್ದವರಿಗೆ ಬೆಲೆ ಎಂದಲ್ಲ. ಇದು ಪಕ್ಷದ ಹೈಕಮಾಂಡ್ ತೀರ್ಮಾನ ಎಂದರು.

ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದು ಪಕ್ಷದ ಹೈಕಮಾಂಡ್ ತಿರ್ಮಾನ: ಶ್ರೀರಾಮುಲು

By

Published : Aug 22, 2019, 1:37 PM IST

ರಾಯಚೂರು:ಬಿಜೆಪಿ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ಮೂರೂವರೆ ವರ್ಷಗಳ ಕಾಲ ಬಿಜೆಪಿ ಸರ್ಕಾರ ರಾಜ್ಯದಲ್ಲಿ‌ ಆಡಳಿತ ನಡೆಸುತ್ತದೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದು ಪಕ್ಷದ ಹೈಕಮಾಂಡ್ ತಿರ್ಮಾನ: ಶ್ರೀರಾಮುಲು

ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ‌ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ರು. ಚುನಾವಣೆಯಲ್ಲಿ ಸೋಲುಂಡಿರುವ ಲಕ್ಷ್ಮಣ ಸವದಿಗೆ ಬಿಜೆಪಿ ಸಚಿವ ಸ್ಥಾನ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಗೆದ್ದವರಿಗೆ ಬೆಲೆ ಎಂದಲ್ಲ. ಇದು ಪಕ್ಷದ ಹೈಕಮಾಂಡ್ ತೀರ್ಮಾನ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಪಕ್ಷದ ವಿಚಾರದಲ್ಲಿ ನಾನು ಹೇಳುವುದು ಕೇವಲ ಹೇಳಿಕೆಯಾಗುತ್ತದೆ ಅಷ್ಟೇ. ಇಲ್ಲಿ ನನ್ನ ನಿರ್ಧಾರವೇನು ಇಲ್ಲ. ಹೈಕಮಾಂಡ್​ನಂತೆ ನಮ್ಮ ನಡೆ ಎಂದರು.

ಇದೇ ವೇಳೆ, ಕೃಷ್ಣ ನದಿಯಿಂದ ಆಗಿರುವ ನೆರೆ ಹಾವಳಿ ವಿಕ್ಷೇಣೆ ಮಾಡಿದ್ದು, ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಹಾಗೂ ವಿದ್ಯುತ್ ಸಮಸ್ಯೆ ಐದು‌ ದಿನಗಳಲ್ಲಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸದ್ಯದಲ್ಲೇ ಕೇಂದ್ರ ಅಧ್ಯಯನ ತಂಡ ಕೂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಎಂದರು.

ABOUT THE AUTHOR

...view details