ಕರ್ನಾಟಕ

karnataka

ETV Bharat / state

ಜೆಡಿಎಸ್​, ಕಾಂಗ್ರೆಸ್​ ಮುಖಂಡರ ಮೇಲೆ ಐಟಿ ದಾಳಿ ಆಗಿದ್ದೇಕೆ: ಶ್ರೀರಾಮುಲು ತಿಳಿಸಿದ್ರು ಕಾರಣ!

ಸಿ.ಎಂ ಕುಮಾರಸ್ವಾಮಿ ಕಾಮಗಾರಿ ನಿರ್ಧಾರಕ್ಕೂ ಮುನ್ನ ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದರು. ಈಗ ಚುನಾವಣೆಗಾಗಿ ಅವರಿಂದ ಮುಂಗಡ ಹಣ ಪಡೆದಿದ್ದಾರೆ ಎಂದು ಶಾಸಕ ಬಿ. ಶ್ರೀರಾಮುಲು ಆರೋಪಿಸಿದ್ದಾರೆ.

ಶಾಸಕ ಬಿ.ಶ್ರೀರಾಮುಲು

By

Published : Apr 4, 2019, 4:37 PM IST

ರಾಯಚೂರು:ರಾಜ್ಯದಲ್ಲಿ ಜೆಡಿಎಸ್​ ಮತ್ತು ಕಾಂಗ್ರೆಸ್​​ ಮುಖಂಡರ ಮೇಲೆ ಐಟಿ ದಾಳಿ ಕಾರಣ ಏನು ಅನ್ನೋದರ ಜತೆಗೆ ಸಿಎಂ ಮತ್ತು ಸಚಿವ ರೇವಣ್ಣ ವಿರುದ್ಧ ಶಾಸಕ ಬಿ. ಶ್ರೀಮುಲು ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಿ.ಎಂ ಕುಮಾರಸ್ವಾಮಿ ಮತ್ತು ರೇವಣ್ಣನವರು ಚುನಾವಣೆಗಾಗಿ ಗುತ್ತಿದಾರಿಂದ ಹಣವನ್ನು ಪಡೆದಿದ್ದೇ ಐಟಿ ದಾಳಿಗೆ ಕಾರಣ ಎಂದು ದೂರಿದ್ದಾರೆ.

ಸಿಎಂ ಕುಮಾರಸ್ವಾಮಿ, ಸಚಿವ ರೇವಣ್ಣನವರು, ಲೋಕೋಪಯೋಗಿ ಇಲಾಖೆಯಿಂದ, ಕಾಮಗಾರಿ ನಿರ್ಧಾರಕ್ಕೂ ಮುನ್ನವೇ ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದರು. ಗುತ್ತಿಗೆದಾರರಿಂದ ಈಗ ಚುನಾವಣೆಗಾಗಿ ಹಣ ಪಡೆದಿದ್ದಾರೆ. ಆ ಕಾರಣಕ್ಕಾಗಿ ಐಟಿ ದಾಳಿ ನಡೆದಿದ್ದು, ಎಲ್ಲಾ ಮಾಹಿತಿ ದೊರೆತ ನಂತರ ಚುನಾವಣೆ ‌ಆಯೋಗಕ್ಕೆ ದೂರು ನೀಡಲಾಗುವುದು ಎಂದು ಮೊಳಕಾಲ್ಮೂರು ಶಾಶಕ ಹೇಳಿದ್ದಾರೆ.

ಇನ್ನು ಲೋಕಸಭಾ ಚುನಾವಣೆ ನಂತರ ಭಾರತೀಯ ಜನತಾ ಪಕ್ಷದಿಂದ ಯಾವುದೇ ಅಪರೇಷನ್ ಕಮಲ ಮಾಡುವುದಿಲ್ಲ. ಮೈತ್ರಿ ಸರ್ಕಾರದಲ್ಲಿನ ಅಸಮಾಧಾನದಿಂದ ಸರ್ಕಾರ ತಾನಾಗಿಯೇ ಪತನವಾಗಲಿದೆ ಎಂದು‌ ಭವಿಷ್ಯ ‌ನುಡಿದರು.

ಶಾಸಕ ಬಿ.ಶ್ರೀರಾಮುಲು

ಕೇರಳದಿಂದ ರಾಹುಲ್ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಕಾಂಗ್ರೆಸ್‌ ಯುವರಾಜ ರಾಹುಲ್‌ ಗಾಂಧಿಯವರ ವಯನಾಡ ಸ್ಪರ್ಧೆಯಿಂದ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಹುಲ್ ಕೇರಳದಿಂದ ಸ್ಪರ್ಧಿಸಿದ್ರೆ ಕಾಂಗ್ರೆಸ್ಸಿಗರು ಮತ್ತಷ್ಟು ಹೀನಾಯವಾಗಿ ಸೋಲು ಅನುಭವಿಸಲಿದ್ದಾರೆ. ರಾಜ್ಯದಿಂದ ರಾಹುಲ್ ಗಾಂಧಿ ಸ್ಪರ್ಧೆಗೆ ಆಹ್ವಾನಿಸಲಾಗಿತ್ತು. ಆದ್ರೆ ‌ಸೋಲಿನ ಭಯದಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ.

ABOUT THE AUTHOR

...view details