ಕರ್ನಾಟಕ

karnataka

ETV Bharat / state

ಬಿಜೆಪಿ ಸರ್ಕಾರ ವಾಮ ಮಾರ್ಗದ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ : ಖಂಡ್ರೆ ಆರೋಪ - ಈಶ್ವರ ಖಂಡ್ರೆ ಆರೋಪ

ಡಿಕೆ ಸಹೋದರರಿಗೆ ಯಾವುದೇ ಭಯವಿಲ್ಲ, ನಾನು ಸಹ ಅಂಜುವುದಿಲ್ಲ. ಸಿಬಿಐ ಸರ್ಕಾರದ ಸಂಸ್ಥೆಯಾಗಿದೆ. ಆದರೆ, ಇದೀಗ ಆಡಳಿತ ಪಕ್ಷದ ಪಂಜರದ ಗಿಳಿಯಾಗಿ, ಪಕ್ಷದ ಏಜೆಂಟ್‌ನಂತೆ ವರ್ತಿಸುತ್ತಿದೆ ಎಂದರು. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ, ನೀಡಿದ ಭರವಸೆಯಂತೆ ಪ್ಯಾಕೇಜ್ ತಲುಪಿಲ್ಲ..

ishwar-khandre-talk-about-cbi-ride-in-kpcc-pricident
ಸಿಬಿಐ ದಾಳಿ ನಡೆಸಿ, ಬಿಜೆಪಿ ಸರ್ಕಾರ ವಾಮಾಮಾರ್ಗದ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ: ಖಂಡ್ರೆ ಆರೋಪ

By

Published : Oct 7, 2020, 5:06 PM IST

ರಾಯಚೂರು :ಉಪಚುನಾವಣೆ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಮನೆಯ ಮೇಲೆ ಸಿಬಿಐ ದಾಳಿ ನಡೆಸಿದ ಬಿಜೆಪಿ,‌ ವಾಮ ಮಾರ್ಗದಿಂದ ಉಪಚುನಾವಣೆ ಗೆಲ್ಲಲು ಹೊರಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.

ಸಿಬಿಐ ದಾಳಿ ನಡೆಸಿ, ಬಿಜೆಪಿ ಸರ್ಕಾರ ವಾಮಮಾರ್ಗದ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ : ಖಂಡ್ರೆ ಆರೋಪ

ನಗರದ ಕಾಂಗ್ರೆಸ್ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖಾ ಸಂಸ್ಥೆಗಳನ್ನ‌ ದುರುಪಯೋಗ ಪಡಿಸಿಕೊಂಡು ಬಿಜೆಪಿ ಸರ್ಕಾರ ದಾಳಿ ನಡೆಸುತ್ತಿದೆ. ಇಂತಹ ದಾಳಿ ನಡೆಸುವ ಪಕ್ಷದಿಂದ ನಮ್ಮ ನಾಯಕರಿಗೆ ರಕ್ಷಣೆ ಇದೆಯಾ ಎಂದು ಪ್ರಶ್ನಿಸಿದರು.

ಡಿಕೆ ಸಹೋದರರಿಗೆ ಯಾವುದೇ ಭಯವಿಲ್ಲ, ನಾನು ಸಹ ಅಂಜುವುದಿಲ್ಲ. ಸಿಬಿಐ ಸರ್ಕಾರದ ಸಂಸ್ಥೆಯಾಗಿದೆ. ಆದರೆ, ಇದೀಗ ಆಡಳಿತ ಪಕ್ಷದ ಪಂಜರದ ಗಿಳಿಯಾಗಿ, ಪಕ್ಷದ ಏಜೆಂಟ್‌ನಂತೆ ವರ್ತಿಸುತ್ತಿದೆ ಎಂದರು. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ, ನೀಡಿದ ಭರವಸೆಯಂತೆ ಪ್ಯಾಕೇಜ್ ತಲುಪಿಲ್ಲ.

ಉತ್ತರಪ್ರದೇಶ ಹಥ್ರಾಸ್​​ನಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆಯಾಗಿದೆ. ಇಂತಹ ಘೋರ ಕೃತ್ಯಕ್ಕೆ ಯೋಗಿ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿತ್ತು. ಬದಲಾಗಿ ಆರೋಪಿಗಳನ್ನ ಸಮರ್ಥನೆ ಮಾಡಿಕೊಳ್ಳುವಂತ ವರ್ತನೆಯನ್ನ ಸರ್ಕಾರ ಅನುಸರಿಸುತ್ತಿದೆ. ಯುಪಿಯಲ್ಲಿ ಜಂಗಲ್ ರಾಜ್ಯ-ಗೂಂಡಾ ರಾಜ್ಯವಾಗಿದೆ ಎಂದು ಯುಪಿ ಸರ್ಕಾರದ ವಿರುದ್ಧ‌ ತೀವ್ರ ವಾಗ್ದಾಳಿ ನಡೆಸಿದರು.

ABOUT THE AUTHOR

...view details