ಕರ್ನಾಟಕ

karnataka

ETV Bharat / state

ಶಾಲಾ ಮಕ್ಕಳ ಶೂ, ಸಾಕ್ಸ್‌ಗೂ ಕನ್ನ: ಮೂವರು ಮುಖ್ಯ ಗುರುಗಳಿಗೆ ಗುನ್ನ - Irregularity in purchasing shoe and sacks

ಶೂ ಹಾಗೂ ಸಾಕ್ಸ್ ಖರೀದಿ ಅವ್ಯವಹಾರ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿನ ಅಲ್ಕೋಡ ಗ್ರಾಮದ ಶಾಲೆಯ ಶಿಕ್ಷಕ ಬಸವರಾಜ, ಆಕಳಕುಂಪಿ ಶಾಲೆಯ ಕೊಟ್ರೇಶ್, ಮಾನ್ವಿ ತಾಲೂಕಿನ ರಾಜಲಬಂಡ ಶಾಲೆಯ ಗೀತಾ, ರಾಯಚೂರು ತಾಲೂಕಿನ ಮಲಿಯಾಬಾದ ಶಾಲೆಯ ಅಲಿಸಾ ಮುಖ್ಯ ಶಿಕ್ಷಕರನ್ನು ರಾಯಚೂರು ಸರ್ವಾಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ. ಎಚ್. ಗೋನಾಳ ಅಮಾನತುಗೊಳಿಸಿ ಆದೇಶಿಸಿದ್ದಾರೆ.

irregularity-in-purchasing-shoe-and-sacks-three-headmaster-suspension
ಶಾಲಾ ಮಕ್ಕಳ ಶೂ ಸಾಕ್ಸ್​ ಖರೀದಿ ಅವ್ಯವಹಾರ

By

Published : Feb 13, 2020, 4:44 PM IST

ರಾಯಚೂರು: ಶಾಲಾ ಮಕ್ಕಳ ಶೂ ಹಾಗೂ ಸಾಕ್ಸ್ ಖರೀದಿ ಅವ್ಯವಹಾರ ಹಿನ್ನೆಲೆ ಜಿಲ್ಲೆಯ ಏಳು ಮುಖ್ಯ ಶಿಕ್ಷಕರ ಪೈಕಿ ನಾಲ್ವರು ಮುಖ್ಯಗುರುಗಳನ್ನು ಡಿಡಿಪಿಐ ಅಮಾನತುಗೊಳಿಸಿದ್ದು, ಇನ್ನೂ ಮೂವರ ಅಮಾನತಿಗಾಗಿ ಅಪರ ಆಯುಕ್ತರಿಗೆ ಶಿಫಾರಸು ಮಾಡಲಾಗಿದೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಅಲ್ಕೋಡ ಗ್ರಾಮದ ಶಾಲೆಯ ಶಿಕ್ಷಕ ಬಸವರಾಜ, ಆಕಳಕುಂಪಿ ಶಾಲೆಯ ಕೊಟ್ರೇಶ್, ಮಾನ್ವಿ ತಾಲೂಕಿನ ರಾಜಲಬಂಡ ಶಾಲೆಯ ಗೀತಾ, ರಾಯಚೂರು ತಾಲೂಕಿನ ಮಲಿಯಾಬಾದ ಶಾಲೆಯ ಅಲಿಸಾ ಮುಖ್ಯ ಶಿಕ್ಷಕರನ್ನ ರಾಯಚೂರು ಸರ್ವಾಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ. ಎಚ್. ಗೋನಾಳ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಇನ್ನುಳಿದ ಮುಖ್ಯಗುರುಗಳಾದ ಬಿಜನಗೇರ ಶಾಲೆಯ ಅರುಣಕುಮಾರ ದೇಸಾಯಿ, ಚಿಂಚೋಡಿ ಶಾಲೆಯ ಮಹಾಂತೇಶ, ರಾಯಚೂರ ನಗರದ ಎಲ್‌ಬಿಎಸ್ ಕಾಲೋನಿ ಶಾಲೆಯ ಶಿಕ್ಷಕ ಎಂ.ಎಚ್.ನಾಯಕರವರ ಅಮಾನತಿಗೆ ಕಲಬುರಗಿ ಅಪರ ಆಯುಕ್ತರಿಗೆ ಶಿಫಾರಸು ಮಾಡಲಾಗಿದೆ.

ಶಾಲಾ ಮಕ್ಕಳ ಶೂ, ಸಾಕ್ಸ್​ ಖರೀದಿ ಅವ್ಯವಹಾರ

ಘಟನೆ ಹಿನ್ನೆಲೆ:

ಜಿಲ್ಲೆಯ ಶೂ ಮತ್ತು ಸಾಕ್ಸ್ ಖರೀದಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ, ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕರ್ತವ್ಯ ಚ್ಯುತಿವೆಸಗಿರುವ ಆಧಾರದ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ABOUT THE AUTHOR

...view details