ಕರ್ನಾಟಕ

karnataka

ETV Bharat / state

ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಅವಮಾನ: ಕಿಡಿಗೇಡಿ ವಿರುದ್ಧ ಠಾಣೆಯಲ್ಲಿ ದೂರು - ದರ್ಶನ ಭಾವಚಿತ್ರಕ್ಕೆ ನಟ ಸುದೀಪ್

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಇದನ್ನು ಕಂಡ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಲಿಂಗಸೂಗೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ರಾಯಣ್ಣ ಭಾವಚಿತ್ರಕ್ಕೆ ಅವಮಾನ

By

Published : Oct 15, 2019, 5:49 AM IST

ರಾಯಚೂರು:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಅವಮಾನ ಮಾಡಿರುವ ಕಿಡಿಗೇಡಿ ವಿರುದ್ಧ ಲಿಂಗಸೂಗೂರು ಠಾಣೆಗೆ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ದೂರು ನೀಡಿದ್ದಾರೆ.

ಸಂಗೊಳ್ಳಿ ರಾಯಣ್ಣರವರ ಭಾವಚಿತ್ರದ ಮೇಲೆ ನಟ ಸುದೀಪ್ ನಿಂತಿರುವ ಭಾವಚಿತ್ರವನ್ನ ನಿಲ್ಲಿಸಿ, ಮಹರ್ಷಿ ವಾಲ್ಮೀಕಿ ಕುಳಿತಿರುವ ಭಾವಚಿತ್ರವನ್ನ ತಲೆ ಮೇಲೆ ಇರಿಸುವ ಮೂಲಕ ಅಪಮಾನಗೊಳಿಸಿದ್ದಾರೆ.

ದರ್ಶನ ಭಾವಚಿತ್ರಕ್ಕೆ ನಟ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಪೋಟೋವನ್ನ ತಲೆ ಮೇಲೆ ಇರುವಂತೆ ಎಡಿಟ್ ಮಾಡಿ, ಆ ವಿಡಿಯೋವನ್ನ ವಾಟ್ಸಪ್​​ ಸ್ಟೇಟಸ್​​ನಲ್ಲಿ ಹಾಕಿ ಅವಮಾನಗೊಳಿಸಿದ್ದಾರೆ.

ಇದನ್ನು ಕಂಡ ಅಭಿಮಾನಿಗಳು ಸ್ಥಳೀಯ ಠಾಣೆಗೆ ತೆರಳಿ ಕಿಡಿಗೇಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ABOUT THE AUTHOR

...view details