ರಾಯಚೂರು: ನಗರದ ಯರಮರಸ್ ಹೊರ ವಲಯದಲ್ಲಿರುವ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇರಿಸಿದ ಸ್ಥಳಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭೇಟಿ ನೀಡಿ, ಪರಿಶೀಲಿಸಿದರು.
ರಾಯಚೂರಲ್ಲಿ ವಿಮಾನ ನಿಲ್ದಾಣ ನಿರ್ಮಾಣ: ಸ್ಥಳ ಪರಿಶೀಲಿಸಿದ ಡಿಸಿಎಂ ಸವದಿ - raichuru today news
ರಾಯಚೂರಿನ ಯಮರಸನ್ ಹೊರ ವಲಯದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇರಿಸಿದ್ದ ಜಾಗವನ್ನು ಡಿಸಿಎಂ ಲಕ್ಷ್ಮಣ ಸವದಿ ಪರಿಶೀಲಿಸಿದರು.
ನಿವೇಶನ ಪರಿಶೀಲಿಸಿದ ಡಿಸಿಎಂ ಸವದಿ
ಈ ಭಾಗದ ಜನರು ಹಲವು ವರ್ಷಗಳಿಂದ ವಿಮಾನ ನಿಲ್ದಾಣ ಸ್ಥಾಪಿಸುವಂತೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು, ಶಾಸಕರೊಂದಿಗೆ ತೆರಳಿ ಡಿಸಿಎಂ ಸವದಿ ನಿವೇಶನವನ್ನು ವೀಕ್ಷಿಸಿದರು.
ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಸೂಕ್ತ ಯೋಜನೆ ರೂಪಿಸುವ ಉದ್ದೇಶದಿಂದ ಅಧಿಕಾರಿಗಳೊಂದಿಗೆ ಜಾಗ ಪರಿಶೀಲನೆ ಮಾಡಲಾಯಿತು.