ಕರ್ನಾಟಕ

karnataka

By

Published : Feb 9, 2020, 5:13 PM IST

ETV Bharat / state

ಕೆಎಸ್​ಆರ್​ಟಿಸಿ ಸಿಬ್ಬಂದಿಯನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಲು ಒತ್ತಾಯ..

ಸಾರಿಗೆ ನೌಕರರ ವೇತನ ಪರಿಷ್ಕರಣೆ 1ನೇ ಜನವರಿ 2020ರಿಂದಲೇ ಜಾರಿಯಾಗಬೇಕಿತ್ತು. ಆದರೆ, ವಿಳಂಬವಾಗಿದೆ. ಸಾರಿಗೆ ನೌಕರರು ಶ್ರಮ ಜೀವಿಗಳಾಗಿದ್ದಾರೆ. ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರೆ. ಆದ್ದರಿಂದ ಸರ್ಕಾರ ಇವರನ್ನೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಸಮಾನ ವೇತನ ನೀಡಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಪ್ರಧಾನ ಕಾರ್ಯದರ್ಶಿ ಮುದ್ದುಕೃಷ್ಣ ಒತ್ತಾಯಿಸಿದರು.

insists on treating KSRTC employees as government employees
ಮುದ್ದುಕೃಷ್ಣ, ಕೆಎಸ್​ಆರ್​ಟಿಸಿ ನೌಕರರ ಮಹಾಮಂಡಳಿ ಪ್ರ, ಕಾರ್ಯದರ್ಶಿ

ರಾಯಚೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್​ಆರ್​ಟಿಸಿ)ಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಸಮಾನ ವೇತನ ನೀಡಬೇಕೆಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಪ್ರಧಾನ ಕಾರ್ಯದರ್ಶಿ ಮುದ್ದುಕೃಷ್ಣ ಒತ್ತಾಯಿಸಿದರು.

ಮುದ್ದುಕೃಷ್ಣ, ಪ್ರ, ಕಾರ್ಯದರ್ಶಿ, ಕೆಎಸ್​ಆರ್​ಟಿಸಿ ನೌಕರರ ಮಹಾಮಂಡಳಿ

ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರ ವೇತನ ಪರಿಷ್ಕರಣೆ 1ನೇ ಜನವರಿ 2020ರಿಂದಲೇ ಜಾರಿಯಾಗಬೇಕಿತ್ತು. ಆದರೆ, ವಿಳಂಬವಾಗಿದೆ. ಸಾರಿಗೆ ನೌಕರರು ಶ್ರಮ ಜೀವಿಗಳಾಗಿದ್ದಾರೆ. ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರೆ. ಆದ್ದರಿಂದ ಸರ್ಕಾರ ಇವರನ್ನೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ, ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಕಳೆದ 25 ವರ್ಷಗಳಿಂದ ಈ ವೇತನ ತಾರತಮ್ಯ ಮುಂದುವರೆದಿದೆ. ಆದ್ದರಿಂದ ವೇತನ ಪರಿಷ್ಕರಣೆ ಮತ್ತು ಸಮಾನ ವೇತನ ನೀಡಲು ಒತ್ತಾಯಿಸಿ, ಫೆ.11ರಂದು ಪ್ರಾದೇಶಿಕ ಸಾರಿಗೆ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದರು.

ABOUT THE AUTHOR

...view details