ರಾಯಚೂರು: ಜಿಲ್ಲೆಯಲ್ಲಿಚಿನ್ನಾಭರಣದ ಮೇಲೆ ಹಾಲ್ ಮಾರ್ಕಿಂಗ್ ಕೇಂದ್ರ ಸ್ಥಾಪಿಸಬೇಕೆಂಬ ಒತ್ತಾಯವಿದ್ದರೂ ಕೇಂದ್ರ ಸ್ಥಾಪನೆಯಾಗಿಲ್ಲ. ರಾಯಚೂರು ನಗರದಲ್ಲಿ 150 ಜ್ಯುವೆಲ್ಲರ್ಸ್ ಮಳಿಗೆಗಳಿವೆ.
ರಾಯಚೂರು: ಹಾಲ್ ಮಾರ್ಕಿಂಗ್ ಕೇಂದ್ರ ಸ್ಥಾಪನೆಗೆ ಚಿನ್ನಾಭರಣ ಮಾಲೀಕರ ಒತ್ತಾಯ - ಹಾಲ್ ಮಾರ್ಕಿಂಗ್ ಕೇಂದ್ರ ಸ್ಥಾಪನೆ
ಜನನಿಬಿಡ ಪ್ರದೇಶದಲ್ಲಿ ಹಾಲ್ ಮಾರ್ಕಿಂಗ್ ಕೇಂದ್ರ ಸ್ಥಾಪಿಸಬಾರದು. ಇದರಿಂದ ಆರೋಗ್ಯದ ಮೇಲೆ ದುಷ್ಪಾರಿಣಮ ಬಿರುತ್ತದೆ. ಹೀಗಾಗಿ, ಮುನ್ನಚ್ಚೆರಿಕಾ ಕ್ರಮ ಕೈಗೊಂಡು ಹಾಲ್ ಮಾರ್ಕಿಂಗ್ ಕೇಂದ್ರ ಸ್ಥಾಪಿಸಬೇಕು ಎಂದು ಚಿನ್ನಾಭರಣ ಮಾಲೀಕರು ಒತ್ತಾಯಿಸಿದ್ದಾರೆ.
ಪಕ್ಕದ ತೆಲಂಗಾಣದ ಹೈದರಾಬಾದ್, ಆಂಧ್ರ ಕರ್ನೂಲ್ ಜಿಲ್ಲೆ, ಬೆಂಗಳೂರು ಹೀಗೆ ಹಲವೆಡೆ ಈ ಜ್ಯುವೆಲ್ಲರ್ಸ್ ಮಳಿಗೆಗಳು ಹಾಲ್ ಮಾರ್ಕಿಂಗ್ ಮಾಡಿಸಿಕೊಂಡು ಮಾರಾಟ ಮಾಡುತ್ತಿವೆ. ಇಲ್ಲವೇ ಚಿನ್ನಾಭರಣ ಕಂಪನಿಗಳಿಂದ ಖರೀದಿಸಿ ಮಾರಾಟ ಮಾಡುತ್ತಿವೆ. ಜನನಿಬಿಡ ಪ್ರದೇಶದಲ್ಲಿ ಹಾಲ್ ಮಾರ್ಕಿಂಗ್ ಕೇಂದ್ರ ಸ್ಥಾಪಿಸಿದರೆ ಆರೋಗ್ಯದ ಮೇಲೆ ದುಷ್ಪಾರಿಣಮ ಬಿರುತ್ತದೆ. ಹೀಗಾಗಿ, ಮುನ್ನಚ್ಚೆರಿಕಾ ಕ್ರಮ ಕೈಗೊಂಡು ಕೇಂದ್ರ ಸ್ಥಾಪಿಸಬೇಕು ಎಂಬ ಒತ್ತಾಯ ಚಿನ್ನಾಭರಣ ಅಂಗಡಿ ಮಾಲೀಕರದು.
ಹಾಲ್ ಮಾರ್ಕಿಂಗ್ಗೆ 75 ಹಾಗೂ 92 ಗುಣಮಟ್ಟದ ಚಿನ್ನಾಭರಣ ಮಾರಾಟ ಮಾಡಬೇಕು ಎಂಬ ಸರ್ಕಾರದ ನಿರ್ದೇಶನವಿದೆ. ಆದರೆ, ಕಲ್ಯಾಣ ಕರ್ನಾಟಕದ ಭಾಗದಲ್ಲಿ 24 ಕ್ಯಾರಟ್ ಚಿನ್ನಾಭರಣ ಕೇಳುತ್ತಾರೆ. ಹೀಗಾಗಿ, ಸರ್ಕಾರ 85, 98 ಕ್ಯಾರಟ್ ಚಿನ್ನಾಭರಣ ಮಾರಾಟಕ್ಕೆ ಮುಂದಾಗಬೇಕು. ಇದರಿಂದ ಗ್ರಾಹಕರಿಗೆ ಲಾಭವಾಗಲಿದೆ ಎನ್ನುತ್ತಾರೆ ಚಿನ್ನಾಭರಣ ಮಳಿಗೆ ಮಾಲೀಕರು.