ಲಿಂಗಸುಗೂರು: ತಾಲೂಕಿನ ಗುರುಗುಂಟಾ ಅಮರೇಶ್ವರ ಬಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ಕಿ ಹೂತಿಟ್ಟ ಪ್ರಕರಣದ ತನಿಖೆಯನ್ನು ಸಿಒಡಿಗೆ ವಹಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಚಾಮರಾಜ ಪಾಟೀಲ್ ಮೂಲಕ ಒತ್ತಾಯಿಸಿತು.
ಗುರುಗುಂಟಾ ಅಮರೇಶ್ವರ ಬಳಿ ಅಕ್ಕಿ ಹೂತಿಟ್ಟ ಪ್ರಕರಣ: ಸಿಒಡಿ ತನಿಖೆಗೆ ವಹಿಸಲು ಒತ್ತಾಯ - Lingsugur Insist on handing over the investigation news
ಕೆಲ ಬಾರಿ ಕಳ್ಳತನದ ಹೆಸರಿನಲ್ಲಿ ನಾಪತ್ತೆ ಮಾಡಿರುವ ಸಂಗತಿ ಇಲಾಖೆ ಮುಂದಿದೆ. ಇಚೆಗೆ ಭಕ್ತರು ನೀಡಿದ ಅಕ್ಕಿ, ಬೇಳೆ ಇತರೆ ಆಹಾರ ಪದಾರ್ಥ ಸದ್ಬಳಕೆ ಮಾಡದೆ ಕಾಟಾಚಾರಕ್ಕೆ ಒಂದು ವರದಿ ಸಿದ್ಧಪಡಿಸಿ ಮಣ್ಣಲ್ಲಿ ಮುಚ್ಚಿಟ್ಟಿದ್ದು ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
![ಗುರುಗುಂಟಾ ಅಮರೇಶ್ವರ ಬಳಿ ಅಕ್ಕಿ ಹೂತಿಟ್ಟ ಪ್ರಕರಣ: ಸಿಒಡಿ ತನಿಖೆಗೆ ವಹಿಸಲು ಒತ್ತಾಯ ಅಕ್ಕಿ ಹೂತಿಟ್ಟ ಪ್ರಕರಣ ಸಿಒಡಿಗೆ ವಹಿಸಲು ಒತ್ತಾಯ](https://etvbharatimages.akamaized.net/etvbharat/prod-images/768-512-8202129-992-8202129-1595929202839.jpg)
ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಸಲ್ಲಿಸುವ ಬಂಗಾರ, ಬೆಳ್ಳಿ, ಅಕ್ಕಿ ಸೇರಿದಂತೆ ಆಹಾರ ಧಾನ್ಯಗಳಿಗೆ ಕಡಿವಾಣ ಹಾಕುವವರು ಯಾರು ಎಂಬುದು ಯಕ್ಷಪ್ರಶ್ನೆಯಾಗಿದೆ. ಬಂಗಾರ, ಬೆಳ್ಳಿ ಮಧ್ಯವರ್ತಿಗಳ ಪಾಲಾಗುತ್ತಿವೆ. ಕೆಲ ಬಾರಿ ಕಳ್ಳತನದ ಹೆಸರಿನಲ್ಲಿ ನಾಪತ್ತೆ ಮಾಡಿರುವ ಸಂಗತಿ ಇಲಾಖೆ ಮುಂದಿದೆ. ಇಚೆಗೆ ಭಕ್ತರು ನೀಡಿದ ಅಕ್ಕಿ, ಬೇಳೆ ಇತರೆ ಆಹಾರ ಪದಾರ್ಥ ಸದ್ಬಳಕೆ ಮಾಡದೆ ಕಾಟಾಚಾರಕ್ಕೆ ಒಂದು ವರದಿ ಸಿದ್ಧಪಡಿಸಿ ಮಣ್ಣಲ್ಲಿ ಮುಚ್ಚಿಟ್ಟಿದ್ದು ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ತಾಲೂಕಿನಲ್ಲಿ ಬರಗಾಲ, ಪ್ರವಾಹ, ಕೊರೊನಾದಂತ ಸಂದಿಗ್ಧ ಸ್ಥಿತಿಯಲ್ಲಿ ಪಡಿತರ ಹಂಚದೆ, ನಿರ್ವಹಣೆ ನಿರ್ಲಕ್ಷ್ಯ ತೋರಿ ನಿಯಮಾನುಸಾರ ಗುಣಮಟ್ಟ ಪರಿಶೀಲಿಸದೆ ಅಪರಾಧ ಎಸಗಿದ್ದಾರೆ. ಕಾರಣ ಈ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಿ ಭಕ್ತರ ಭಾವನೆಗಳಿಗೆ ಆಗಿರುವ ಅಘಾತಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.