ಕರ್ನಾಟಕ

karnataka

ETV Bharat / state

ಗುರುತಿನ ಚೀಟಿಗೆ ಆಗ್ರಹ.. ರಾಯಚೂರಿನಲ್ಲಿ ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

ರಾಯಚೂರಿನಲ್ಲಿ ಗುರುತಿನ ಚೀಟಿ ನೀಡುವಂತೆ ಒತ್ತಾಯಿಸಿ ಸಫಾಯಿ ಕರ್ಮಚಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಫಾರಿ ಕರ್ಮಚಾರಿ
ಸಫಾರಿ ಕರ್ಮಚಾರಿ

By

Published : Sep 21, 2021, 12:12 PM IST

Updated : Sep 21, 2021, 7:56 PM IST

ರಾಯಚೂರು: ಸಫಾಯಿ ಕರ್ಮಚಾರಿ ಗುರುತಿನ ಚೀಟಿ‌ ನೀಡದಿರುವುದನ್ನ ಖಂಡಿಸಿ ಸಫಾಯಿ ಕರ್ಮಚಾರಿ ಮಹಿಳೆಯೊಬ್ಬರು ಚರಂಡಿ ನೀರು ಮೈಮೇಲೆ ಸುರಿದುಕೊಂಡು ಪ್ರತಿಭಟನೆ ನಡೆಸಿರುವ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದೆ.

ಗುರುತಿನ ಚೀಟಿ ನೀಡಲು ಜಿಲ್ಲಾಡಳಿತ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಚರಂಡಿ ನೀರನ್ನು ಮೈ ಮೇಲೆ ಸುರಿದುಕೊಂಡು ಕರ್ಮಚಾರಿ ಮಹಿಳೆಯೊಬ್ಬರು ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಮುಂದೆಯೇ ಕರ್ಮಚಾರಿ ಮಹಿಳೆ ಚರಂಡಿ ನೀರು ಸುರಿದುಕೊಂಡು ಪ್ರತಿಭಟಿಸಿದರು.

ಸಫಾರಿ ಕರ್ಮಚಾರಿಗಳನ್ನು ಗುರುತಿಸಿ ಜಿಲ್ಲಾಡಳಿತ ಗುರುತಿನ ಚೀಟಿ ನೀಡಬೇಕು. ಇದಕ್ಕಾಗಿ ಹಲವು ಅರ್ಜಿ ಸಲ್ಲಿಸಲಾಗಿತ್ತು. ಅಲ್ಲದೇ ಮನವಿ ಕೊಡಲಾಗಿತ್ತು. ಆದ್ರೆ ಸಂಬಂಧಿಸಿದ ಅಧಿಕಾರಿಗಳು ಸಫಾಯಿ ಕರ್ಮಾಚಾರಿಗಳ ಮನವಿಗೆ ಸ್ಪಂದಿಸಿಲ್ಲವೆಂದು ದೂರಿದ್ದಾರೆ. ಕೂಡಲೇ ಜಿಲ್ಲಾಡಳಿತ ಮ್ಯಾನುವಲ್ ಸ್ಕಾವೆಂಜರ್‌ಗಳಿಗೆ ಗುರುತಿನ ಚೀಟಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳದ ಮಿಯಾಪುರ ಗ್ರಾಮದಲ್ಲಿದೆಯಾ ಅಸ್ಪೃಶ್ಯತೆ ಆಚರಣೆ...?

Last Updated : Sep 21, 2021, 7:56 PM IST

ABOUT THE AUTHOR

...view details