ಕರ್ನಾಟಕ

karnataka

ETV Bharat / state

ಲೈಂಗಿಕ ಅಲ್ಪಸಂಖ್ಯಾತರಿಗೆ ಆಪ್ತ ಮಿತ್ರ ಸಂಸ್ಥೆಯಿಂದ ಅನ್ಯಾಯದ ಆರೋಪ

ಲೈಂಗಿಕ ಅಲ್ಪಸಂಖ್ಯಾತರ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕಾದ ಆಪ್ತ ಮಿತ್ರ ಸಂಘ, ಸರ್ಕಾರದ ವಿವಿಧ ಯೋಜನೆಗಳಾದ ಸಾಲ ಸೌಲಭ್ಯ ಸಮುದಾಯದ ಜನರಿಗೆ ತಲುಪಿಸದೆ, ಲೈಂಗಿಕ ಅಲ್ಪಸಂಖ್ಯಾತರು ಅಲ್ಲದವರನದನ್ನು ಸಮುದಾಯದ ಜನರು ಎಂದು ತೊರಿಸಿ ಅವ್ಯಹಾರ ನಡೆಸಿದೆ ಎಂದು ಆರೋಪ ಕೇಳಿ ಬರುತ್ತಿದೆ.

sexual minorities
ಲೈಂಗಿಕ ಅಲ್ಪಸಂಖ್ಯಾತರು

By

Published : Nov 2, 2020, 10:51 PM IST

ರಾಯಚೂರು: ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಆಪ್ತ ಮಿತ್ರ ಸಂಸ್ಥೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಮುದಾಯದ ಜನರಿಗೆ ನೀಡಲಾಗುವ ಸಾಲ ಸೌಲಭ್ಯದಲ್ಲಿ, ಸಂಸ್ಥೆಯ ಆಡಳಿತ ಮಂಡಳಿ ಅವ್ಯಹಾರ ನಡೆಸಿರುವ ಆರೋಪ ಕೇಳಿ ಬರುತ್ತಿದೆ.

2012 ರಿಂದ 2020 ವರೆಗೆ ಸಮುದಾಯಕ್ಕೆ ಸರ್ಕಾರದ ಉದ್ಯೋಗಿನಿ ಯೋಜನೆಯ ಫಲಾನುಭವಿಗಳ ಆಯ್ಕೆ ಪಟ್ಟಿ ಬಹಿರಂಗ ಪಡಿಸುತ್ತಿಲ್ಲ, ಈ ಕುರಿತು ವಿಚಾರಿಸಿದರೆ ಅವರ ಮೇಲೆ ದೌರ್ಜನ್ಯ ಮಾಡುತ್ತಿದ್ದು, ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಮನಕ್ಕೆ ತಂದರು ಯಾವುದೇ ಪ್ರಯೋಜನೆಯಾಗುತ್ತಿಲ್ಲ.

ಲೈಂಗಿಕ ಅಲ್ಪಸಂಖ್ಯಾತರು

ಅಲ್ಲದೇ ಸಮುದಾಯದ ಪರವಾಗಿ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಪ್ತ ಮಿತ್ರ ಸಂಸ್ಥೆ ಕೇವಲ ಗುರಿ ಮುಟ್ಟುವ ಉದ್ದೇಶದಿಂದ ಸಮುದಾಯದಲ್ಲದವರನ್ನು ಸೇರಿಸುಸುವ ಮೂಲಕ ಅರ್ಹರಿಗೆ ಅನ್ಯಾಯ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಉತ್ತರ ಕರ್ನಾಟಕ ಜೋಗಪ್ಪ ಸಂಘದ ಸಿಂಧನೂರು ತಾಲೂಕು ಅಧ್ಯಕ್ಷೆ ಮಧುಶ್ರೀ ಮಾತನಾಡಿ, ಆಪ್ತ ಮಿತ್ರ ಸಂಸ್ಥೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಪರವಾಗಿ ಕಾರ್ಯ ನಿರ್ವಸುವ ಬದಲಿಗೆ ನಮಗೆ ಅನ್ಯಾಯ ಮಾಡುತ್ತಿದ್ದು, ಸರ್ಕಾರದ ಉದ್ಯೋಗಿನಿ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸಾಲ ನೀಡದೆ, ಸಮುದಾಯದವರು ಅಲ್ಲದವರಿಗೆ ಸಾಲ ನೀಡಿದ್ದಾರೆ, ಅನರ್ಹರ ಖಾತೆಗೆ ಐವತ್ತು ಸಾವಿರ ಜಮಾ ಮಾಡಿದ ನಂತರ ನಲವತ್ತು ಸಾವಿರ ಹಿಂಪಡೆಯುವ ಮೂಲಕ ಅವ್ಯಹಾರ ನಡೆಸಿದ್ದಾರೆ. ಈ ಕುರಿತು ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನೆಯಾಗಿಲ್ಲ, ಈ ಕುರಿತು ತನಿಖೆಯಾಗಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ತಿಳಿಸಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಉತ್ತರ ಕರ್ನಾಟಕ ಜೋಗಪ್ಪ ಸಂಘದ ಸದಸ್ಯೆ ಯಲ್ಲಮ್ಮ ಮಾತನಾಡಿ, ಆಪ್ತ ಮಿತ್ರ ಸಂಸ್ಥೆಯವರು ಸರ್ಕಾರದ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲ ಕೊಡಿಸುವುದಾಗಿ ಹೇಳಿ ಪ್ರತಿಯೊಬ್ಬರಿಂದ ಹತ್ತು ಸಾವಿರ. ಪಡೆದಿದ್ದು, ನಾನು ಎಂಟು ಹತ್ತು ಜನರಿಂದ ದುಡ್ಡು ಪಡೆದು ಸಂಸ್ಥೆಯ ಅಧ್ಯಕ್ಷರಿಗೆ ನೀಡಿರುವೆ ಆದರೆ ಇಲ್ಲಿಯವರೆಗೂ ಸಾಲ ಸೌಲಭ್ಯ ನೀಡಿಲ್ಲ, ಸಮುದಾಯ ಅಲ್ಲದವರಿಗೆ ಈ ಯೋಜನೆಯಲ್ಲಿ ಸಾಲ ನೀಡಿದ್ದಾರೆ, ನಮಗೆ ಸಂಸ್ಥೆಯಿಂದ ಅನ್ಯಾಯವಾಗಿದೆ ಎಂದರು.

ABOUT THE AUTHOR

...view details