ರಾಯಚೂರು :ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯೊಬ್ಬ ತಟ್ಟೆಯಿಲ್ಲದೆ ಟವಲ್ ಮೇಲೆ ಊಟ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ಈ ಆಸ್ಪತ್ರೆಗೆ ಅದೇನ್ ದೊಡ್ಡರೋಗ.. ತಟ್ಟೆಯಿಲ್ಲದೇ ಟವಲ್ ಮೇಲೆ ಒಳರೋಗಿ ಊಟ.. - ತಟ್ಟೆ
ಒಳರೋಗಿಯೊಬ್ಬ ಊಟ ಮಾಡುವ ತಟೆಯಿಲ್ಲದ ಪರಿಣಾಮ ತನ್ನ ಟವಲ್ ಮೇಲೆ ಊಟ ಮಾಡಿರುವ ಘಟನೆ ಲಿಂಗಸೂಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಒಳರೋಗಿ
ಜಿಲ್ಲೆಯ ಲಿಂಗಸೂಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಯೊಬ್ಬ ಊಟ ಮಾಡುವ ತಟೆಯಿಲ್ಲದ ಪರಿಣಾಮ ತನ್ನ ಟವಲ್ ಮೇಲೆ ಊಟ ಮಾಡಿದ್ದಾನೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಊಟ ನೀಡಬೇಕು. ಊಟ ನೀಡುವಾಗ ತಟ್ಟೆ ವ್ಯವಸ್ಥೆ ಇಲ್ಲವೆ ಯುಸ್ ಆ್ಯಂಡ್ ಥ್ರೂ ತಟ್ಟೆಯನ್ನಾದರೂ ನೀಡಬೇಕು.
ಆದರೆ ಇದ್ಯಾವುದು ಇಲ್ಲದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯೊಬ್ಬ ತನ್ನ ಬಳಿ ತಟ್ಟೆಯಿಲ್ಲದ ಕಾರಣ, ಟವಲ್‌ನಲ್ಲಿ ಊಟ ಮಾಡುತ್ತಿರುವುದು ಕಂಡು ಬಂದಿದೆ.