ರಾಯಚೂರು:ಜಿಲ್ಲೆಯಲ್ಲಿ ಉಂಟಾದ ನೆರೆ ಹಾವಳಿಯಿಂದ 300 ಕೋಟಿಗೂ ಹೆಚ್ಚು ಹಾನಿಯಾಗಿದ್ದು, ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಹೈದರಾಬಾದ್ ಕರ್ನಾಟಕ ಪ್ರದೇಶ ಮಂಡಳಿಯಿಂದ ಸಹಕಾರ ನೀಡಲಾಗುವುದು ಎಂದು ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ಮಂಡಳಿಯ ಆಯುಕ್ತ ಸುಬೋಧ್ ಯಾದವ್ ತಿಳಿಸಿದರು.
ನೆರೆ ಹಾನಿ ಕುರಿತು ಜಿಲ್ಲಾಡಳಿತದಿಂದ ಅಗತ್ಯ ಮಾಹಿತಿ ಪಡೆಯಲಾಗಿದೆ: ಸುಬೋಧ್ ಯಾದವ್
ರಾಯಚೂರು ಜಿಲ್ಲೆಯಲ್ಲಿನ ನೆರೆ ಹಾಗೂ ಬರದಿಂದ ರೈತರು ಹಾಗೂ ಜನರಿಗೆ ಉಂಟಾದ ಸಮಸ್ಯೆ ಕುರಿತು ಚರ್ಚೆ ಮಾಡಲಾಗಿದೆ ಎಂದು ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ಮಂಡಳಿಯ ಆಯುಕ್ತ ಸುಬೋಧ್ ಯಾದವ್ ತಿಳಿಸಿದರು.
ಸುಬೋಧ್ ಯಾದವ್
ಜಿಲ್ಲಾಡಳಿತದ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿನ ನೆರೆ ಹಾಗೂ ಬರದಿಂದ ರೈತರಿಗೆ ಹಾಗೂ ಜನರಿಗೆ ಉಂಟಾದ ಸಮಸ್ಯೆ ಕುರಿತು ಚರ್ಚೆ ಮಾಡಲಾಗಿದೆ. ಬರ ಹಾಗೂ ನೆರೆ ಹಾನಿಯ ಕುರಿತು ಜಿಲ್ಲಾಡಳಿತದಿಂದ ಅಗತ್ಯ ಮಾಹಿತಿ ಪಡೆಯಲಾಗಿದೆ ಎಂದರು.
ಕ್ರೀಡಾಂಗಣ ಕಾಮಗಾರಿಯ ಕುರಿತು ಸಮಗ್ರವಾಗಿ ಚರ್ಚಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ಸಭೆ ಮಾಡಲು ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಚುರುಕುಗೊಳಿಸಿ ಕ್ರೀಡಾಪಟುಗಳಿಗೆ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.