ರಾಯಚೂರು:ಕೊರೊನಾ ಸೋಂಕಿನ ಭೀತಿಯಿಂದಾಗಿ ಲಾಕ್ ಡೌನ್ ಆಗಿರುವ ರಾಯಚೂರಿನಲ್ಲಿ ನಿನ್ನೆ ಸಂಜೆಯಿಂದ ಇಂದಿರಾ ಕ್ಯಾಂಟೀನ್ ಆರಂಭವಾಗಿದೆ.
ಲಾಕ್ಡೌನ್ ನಡುವೆಯೂ ಇಂದಿರಾ ಕ್ಯಾಂಟೀನ್ ಓಪನ್, ಜನ ಬಾರದೇ ಆಹಾರ ವೇಸ್ಟ್ - Raichur Indira canteen news
ಕೊರೊನಾ ಭೀತಿಯಿಂದಾಗಿ ರಾಜ್ಯಾದ್ಯಂತ ಲಾಕ್ಡೌನ್ ಹೇರಲಾಗಿದೆ. ಈ ನಡುವೆ ರಾಯಚೂರಿನಲ್ಲಿ ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ತೆರೆದಿದ್ದು, ಜನರು ಮಾತ್ರ ಕ್ಯಾಂಟೀನ್ಗೆ ಬರುತ್ತಿಲ್ಲ.
![ಲಾಕ್ಡೌನ್ ನಡುವೆಯೂ ಇಂದಿರಾ ಕ್ಯಾಂಟೀನ್ ಓಪನ್, ಜನ ಬಾರದೇ ಆಹಾರ ವೇಸ್ಟ್ Indira canteen](https://etvbharatimages.akamaized.net/etvbharat/prod-images/768-512-6570790-thumbnail-3x2-jayjpg.jpg)
ನಗರದ ಕೇಂದ್ರೀಯ ಬಸ್ ನಿಲ್ದಾಣ, ಗಂಜ್ ಆವರಣ, ಸ್ಟೇಷನ್ ರಸ್ತೆಯ ಬಳಿಯ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಇಂದು ಬೆಳಗಿನ ಉಪಹಾರವಾಗಿ ಚಿತ್ರಾನ್ನ ಹಾಗೂ ಚಟ್ನಿ ನೀಡಲಾಗುತ್ತಿದೆ. ಆದ್ರೆ ಕ್ಯಾಂಟೀನ್ ಜನರಿಲ್ಲದೇ ಬಿಕೋ ಎನ್ನುತ್ತಿರುವುದು ಕಂಡು ಬಂದಿದ್ದು, ಬೆರಳೆಣಿಕೆಯಷ್ಟು ಜನ ಮಾತ್ರ ಬೆಳಗ್ಗೆ ಬಂದಿದ್ದಾರೆ.
ಇನ್ನು ಕ್ಯಾಂಟೀನ್ನಲ್ಲಿ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟ ಸಹ ನೀಡಲಾಗುತ್ತದೆ. ಆದ್ರೆ ಲಾಕ್ ಡೌನ್ನಿಂದಾಗಿ ಮನೆಯಿಂದ ಜನರು ಹೊರಗಡೆ ಬಾರದಂತೆ ಸೂಚನೆ ನೀಡಿದ್ದು, ಓಡಾಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿಲ್ಲ. ಹೀಗಾಗಿ ಮರು ಆರಂಭವಾಗಿರುವ ಇಂದಿರಾ ಕ್ಯಾಂಟೀನ್ಗೆ ಯಾರೂ ಬರುತ್ತಿಲ್ಲ.