ಕರ್ನಾಟಕ

karnataka

ETV Bharat / state

ಅಯೋಧ್ಯೆ ತೀರ್ಪು ಭಾರತದ ಗೆಲುವು: ಸಚಿವ ಶ್ರೀರಾಮುಲು - Statement by Health Minister B. Sriramulu at Raichur

ಅಯೋಧ್ಯೆ ತೀರ್ಪು ಯಾರೊಬ್ಬರ ಗೆಲುವಾಗದು. ಅದು ಇಡೀ ಭಾರತದ ಗೆಲುವು ಎಂದು ಆರೋಗ್ಯ ಸಚಿವ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

India's victory over Ayodhya verdict

By

Published : Nov 10, 2019, 7:01 PM IST

ರಾಯಚೂರು: ಅಯೋಧ್ಯೆ ತೀರ್ಪು ಯಾರೊಬ್ಬರ ಗೆಲುವು ಅಲ್ಲ. ಅದು ಇಡೀ ಭಾರತದ ಗೆಲುವು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ಹಿಂದುಳಿದ‌ ವರ್ಗಗಳ ವಿದ್ಯಾರ್ಥಿ ವಸತಿ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ರಾಮ ಒಂದು ವರ್ಗಕ್ಕೆ ಸಿಮೀತವಲ್ಲ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಮಮಂದಿರ ರಾಷ್ಟ್ರಮಂದಿರ ಆಗಬೇಕೆಂದು ಹೇಳಿದ್ದಾರೆ. ಅವರ ಹೇಳಿಕೆಗೆ ನನ್ನ ಸಹಮತವಿದೆ ಎಂದು ತಿಳಿಸಿದರು.

ಆರೋಗ್ಯ ಸಚಿವ ಸಚಿವ ಬಿ.ಶ್ರೀರಾಮುಲು

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನೆರೆ ಸಂತ್ರಸ್ತರನ್ನೂ ನಿಭಾಯಿಸುವ ಕಾರ್ಯಗಳು ಮುಂದುವರೆಯುತ್ತಿವೆ. ಆದರೆ, ಪ್ರತಿಪಕ್ಷಗಳು ಬಾಯಿ ಚಪಲಕ್ಕೆ ಸರ್ಕಾರದ ಮೇಲೆ ಆರೋಪ ಮಾಡುತ್ತಿವೆ ಎಂದು ಹರಿಹಾಯ್ದರು.

ಹಿಂದುಳಿದ ವರ್ಗಗಳ 1 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಕಡಿತಗೊಳಿಸುವುದಿಲ್ಲ. ಅದು ಕೇವಲ ಮಾಧ್ಯಮ ವಂದತಿ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details