ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ಹೆಚ್ಚಿದ ಹರಿವು: ನೀರು ಪಾಲಾದ ಪಂಪ್​ಸೆಟ್​ಗಳು

ಜಿಲ್ಲೆಯ ಗಡಿ ಭಾಗದಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚುತ್ತಿರುವ ಪರಿಣಾಮ ನಡುಗಡ್ಡೆ ಪ್ರದೇಶಗಳ ಗ್ರಾಮಗ ಳಾದ ಡಿ.ರಾಫೂರು, ಆತ್ಕೂರು ಗ್ರಾಮಗಳ ರೈತರು ಜಮೀನಿನಲ್ಲಿದ್ದ ಪಂಪ್ ಸೆಟ್​ಗಳು ನೀರು ಪಾಲಾಗಿವೆ.

Increased water flow rate

By

Published : Aug 11, 2019, 3:27 AM IST

ರಾಯಚೂರು:ಜಿಲ್ಲೆಯ ಗಡಿ ಭಾಗದಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚುತ್ತಿರುವ ಪರಿಣಾಮ ನಡುಗಡ್ಡೆ ಪ್ರದೇಶಗಳಾದ ಡಿ.ರಾಫೂರು, ಆತ್ಕೂರು ಗ್ರಾಮಗಳ ರೈತರು ತಮ್ಮ ಜಮೀನಿನಲ್ಲಿ ಇಟ್ಟಿದ್ದ ಪಂಪ್ ಸೆಟ್​ಗಳು ಹಾಳಾಗಿ ಹೋಗಿವೆ.

ಕೃಷ್ಣಾ ನದಿಯಿಂದ 5 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಬಿಟ್ಟಿರುವ ಬಿಟ್ಟಿರುವ ಕಾರಣ ನಡುಗಡ್ಡೆ ಪ್ರದೇಶಗಳ ರೈತರು ಬೆಳೆದ ಬೆಳೆಗಳು ನೀರು ಪಾಲಾಗಿವೆ. ಅದರಂತೆ ಪಂಪ್​ಸೆಟ್​ಗಳೂ ಸಹ. ಅವುಗಳನ್ನು ಉಳಿಸಿಕೊಳ್ಳಲು ರೈತರು ಹರ ಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಇತ್ತ ಪ್ರವಾಹದಿಂದ ರೈತರು ಬದುಕು ಅತಂತ್ರವಾಗಿದೆ.

ನೀರು ಪಾಲಾದ ಪಂಪ್​ಸೆಟ್​ಗಳು

ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದ್ದು, ಕಂಗಾಲಾದ ರೈತರ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ದಿನದಿಂದ ದಿನಕ್ಕೆ ನೀರಿನ ಹರಿವಿನ ಪ್ರಮಾಣ ಅಧಿಕವಾಗುತ್ತಿರುವುದರಿಂದ ಕ್ಷಣಕ್ಷಣಕ್ಕೂ ಆತಂಕ ಹೆಚ್ಚಿಸುತ್ತಿದೆ. ಶನಿವಾರ ಸಹ ಅಧಿಕವಾಗಿ ನೀರು ಬಿಟ್ಟಿರುವ ಕಾರಣ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ನಿದ್ದೆಗೆಟ್ಟು ಜಮೀನುಗಳಲ್ಲಿಯೇ ಬೀಡು ಬಿಡುವಂತಾಗಿದೆ.

ABOUT THE AUTHOR

...view details