ಕರ್ನಾಟಕ

karnataka

ETV Bharat / state

ಗಣರಾಜ್ಯೋತ್ಸವ ಹಿನ್ನೆಲೆ ರಾಯಚೂರಲ್ಲಿ ಬಿಗಿ ಪೊಲೀಸ್​​​​ ಭದ್ರತೆ - ರಾಯಚೂರು ಗಣರಾಜ್ಯೋತ್ಸವ ಪೊಲೀಸ್ ಬಿಗಿ ಭದ್ರತೆ

ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.

increased-police-security-for-republic-day-in-raichuru
ರಾಯಚೂರು ಜಿಲ್ಲಾ ಪೊಲೀಸ್

By

Published : Jan 25, 2020, 11:46 AM IST

Updated : Jan 25, 2020, 12:20 PM IST

ರಾಯಚೂರು: ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.

ಆರ್​ಟಿಪಿಎಸ್, ವೈಟಿಪಿಎಸ್, ಆಕಾಶವಾಣಿ, ಪವರ್ ಗ್ರಿಡ್, ಹಟ್ಟಿ ಚಿನ್ನದ ಗಣಿ, ಬಸವಸಾಗರ(ನಾರಾಯಣಪುರ) ಜಲಾಶಯ, ರೈಲ್ವೆ ನಿಲ್ದಾಣ ಸೇರಿದಂತೆ ಬಸ್ ನಿಲ್ದಾಣದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜತೆಗೆ ಪ್ರಮುಖ ಪ್ರದೇಶಗಳ ಮೇಲೆ ನಿಗಾ ವಹಿಸಲು ಚೆಕ್ ಪೋಸ್ಟ್​ಗಳನ್ನು ನಿರ್ಮಿಸಲಾಗಿದೆ.

ಗಣರಾಜ್ಯೋತ್ಸವ ಹಿನ್ನೆಲೆ ಬಿಸಿಲು ನಾಡಿನಲ್ಲಿ ಪೊಲೀಸ್​ ಭದ್ರತೆ

ಒಟ್ಟು ಜಿಲ್ಲೆಯಾದ್ಯಂತ 4 ಡಿವೈಎಸ್ಪಿ, 13 ಸಿಪಿಐ, 23 ಪಿಎಸ್​​ಐ, 89 ಎಎಸ್ಐ, 68 ಮಹಿಳಾ ಪೊಲೀಸ್ ಪೇದೆಗಳು, 495 ಪುರುಷ ಪೊಲೀಸ್ ಪೇದೆಗಳು, 10 ಡಿಎಆರ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡು ಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Last Updated : Jan 25, 2020, 12:20 PM IST

ABOUT THE AUTHOR

...view details