ರಾಯಚೂರು: ಮನುಷ್ಯನಿಗೆ ಮಾನಸಿಕವಾಗಿ ನೆಮ್ಮದಿ ಬಹಳ ಮುಖ್ಯ. ಒಂದು ವೇಳೆ ಮನುಷ್ಯನ ಮೇಲೆ ಒತ್ತಡ, ಆತನಿಗೆ ದುಷ್ಟಚಟಗಳು ಜಾಸ್ತಿಯಾದ್ರೆ ಅದರ ನೇರ ಪರಿಣಾಮ ಮನಸ್ಸಿನ ಮೇಲೆ ಬೀರಿ ಮಾನಸಿಕ ಕಾಯಿಲೆಗೆ ಒಳಗಾಗುತ್ತಾರೆ. ಅಂತೆಯೇ ರಾಯಚೂರು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. 2016-17ರಲ್ಲಿ 6,449 ಮಾನಸಿಕ ರೋಗಿಗಳು ಪತ್ತೆಯಾಗಿದ್ದರು. 2017-18ರಲ್ಲಿ ಇದು 46 ಸಾವಿರದ 59ಕ್ಕೆ ಏರಿದೆ. ಇನ್ನು 2018-19 ರಲ್ಲಿ 44,854 ಮಾನಸಿಕ ರೋಗಿಗಳು ಪತ್ತೆಯಾಗಿದ್ದಾರೆ. ಇದರಲ್ಲಿ ಬಾಣಂತಿಯರು ಕೂಡ ಇರುವುದು ಆತಂಕಕಾರಿ ವಿಷಯವಾಗಿದೆ. ಇಂತಹ ರೋಗಿಗಳಿಗೆ ಮನೋಚೈತನ್ಯ ಯೋಜನೆಯಡಿಯಲ್ಲಿ ಆಯಾ ಕಾಲಕ್ಕೆ ಜಿಲ್ಲೆಯ ಕೇಂದ್ರಗಳಲ್ಲಿ ಚಿಕಿತ್ಸೆ ಹಾಗೂ ಔಷಧಿಯನ್ನ ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿದೆ ಅಂತಾರೆ ಮಾನಸಿಕ ರೋಗಿಗಳ ಅನುಷ್ಠಾನಾಧಿಕಾರಿಗಳು.