ಕರ್ನಾಟಕ

karnataka

ETV Bharat / state

ಕಳೆದ 2 ವರ್ಷಗಳಲ್ಲಿ ಲಕ್ಷಾಂತರ ರೂಪಾಯಿ ವಂಚನೆ ; ವಿದ್ಯಾವಂತರಿಗೇ ಹೆಚ್ಚು ದೋಖಾ!! - Increase cyber crime in Raichur

ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯ 39 ಪ್ರಕರಣಗಳಲ್ಲಿ ಬರೋಬ್ಬರಿ 68,16,715 ರೂಪಾಯಿ ಹಣವನ್ನ ವಂಚನೆ ಮಾಡಲಾಗಿದ್ದರೆ, ಇದರಲ್ಲಿ 3,50,879 ರೂಪಾಯಿ ಹಣವನ್ನ ರಿಕವರಿ ಮಾಡಲಾಗಿದೆ. ಇನ್ನುಳಿದ ಹಣವನ್ನು ರಿಕವರಿ ಮಾಡಲು ತನಿಖೆ ಮುಂದುವರೆದಿದೆ..

Increase cyber crime in Raichur
ಕಳೆದ 2 ವರ್ಷಗಳಲ್ಲಿ ಲಕ್ಷಾಂತರ ರೂಪಾಯಿ ವಂಚನೆ

By

Published : Dec 9, 2020, 8:51 PM IST

ರಾಯಚೂರು :ಜಿಲ್ಲೆಯಲ್ಲಿ ಇತ್ತೀಚೆಗೆ ವಂಚನೆ ಪ್ರಕರಣ ಹೆಚ್ಚಾಗುತ್ತಿವೆ. 2019ರಲ್ಲಿ ಸೈಬರ್ ಕ್ರೈಂ ಆರೋಪದಡಿ 12 ಪ್ರಕರಣ ದಾಖಲಾಗಿದ್ದು, ಲಕ್ಕಿ ಡ್ರಾ, ಎಟಿಎಂ ಸ್ಕಿಮ್ಮಿಂಗ್, ಎಟಿಎಂ ಕಾರ್ಡ್ ಎಕ್ಸ್‌ಚೇಂಜ್, ಡಿಸ್ಟ್ರಿಬ್ಯೂಟರ್ ನೀಡುವುದು, ಒಎಲ್​ಎಕ್ಸ್​​ ಚಿನ್ನಾಭರಣ ಅಂಗಡಿ ತೆಗೆಯುವುದು, ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಬರೋಬ್ಬರಿ 38,05,238 ರೂಪಾಯಿ ವಂಚನೆ ಮಾಡಿದ್ದಾರೆ. ಇದರಲ್ಲಿ 1.28 ಲಕ್ಷ ರೂ. ಹಣವನ್ನ ರಿಕವರಿ ಮಾಡಲಾಗಿದೆ.

2020ರಲ್ಲಿ ಸೈಬರ್​ ಕೈಂ ಆರೋಪದಡಿಯಲ್ಲಿ 27 ಪ್ರಕರಣ ದಾಖಲಾಗಿವೆ. ಇದರಲ್ಲಿ ಒಟಿಪಿ, ಆನ್‌ಲೈನ್ ಶಾಪಿಂಗ್, ಎಟಿಎಂ ಕಾರ್ಡ್ ಎಕ್ಸ್‌ಚೇಂಜ್, ಎಟಿಎಂ ಸ್ಕಿಮ್ಮಿಂಗ್, ಕಸ್ಟಮರ್ ಕೇರ್, ಟೀವ್ ವೀವರ್, ಏಜೆನ್ಸಿ ನೀಡುವ, ಮುದ್ರಾ ಫೈನಾನ್ಸ್ ಎನ್ನುವ ಹೆಸರಿನಲ್ಲಿ 30,11,477 ರೂ. ವಂಚನೆ ಮಾಡಿದ್ದಾರೆ. ಇದರಲ್ಲಿ ₹2,22,879 ಹಣವನ್ನ ರಿಕವರಿ ಮಾಡಲಾಗಿದ್ದು, ಇನ್ನುಳಿದ ಹಣವನ್ನ ರಿಕವರಿ ಮಾಡಲು ತನಿಖೆ ಮುಂದುವರೆದಿದೆ.

ಓದಿ:ಎಲ್ಲಾ ಗ್ರಾಮೀಣ ಪ್ರದೇಶದ ಮನೆಗಳಿಗೂ 2024ರೊಳಗಾಗಿ ಕಾರ್ಯಾತ್ಮಕ ನಳ ಸೌಲಭ್ಯ: ಸಚಿವ ಈಶ್ವರಪ್ಪ

ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯ 39 ಪ್ರಕರಣಗಳಲ್ಲಿ ಬರೋಬ್ಬರಿ 68,16,715 ರೂಪಾಯಿ ಹಣವನ್ನ ವಂಚನೆ ಮಾಡಲಾಗಿದ್ದರೆ, ಇದರಲ್ಲಿ 3,50,879 ರೂಪಾಯಿ ಹಣವನ್ನ ರಿಕವರಿ ಮಾಡಲಾಗಿದೆ. ಇನ್ನುಳಿದ ಹಣವನ್ನು ರಿಕವರಿ ಮಾಡಲು ತನಿಖೆ ಮುಂದುವರೆದಿದೆ.

ಈ ಆನ್​ಲೈನ್​​ ವಂಚಕರು ಮೊದಲು ಅಮಾಯಕರನ್ನ ಗುರುತಿಸಿ ಅವರಿಂದ ಮೊಬೈಲ್ ನಂಬರ್ ತೆಗೆದುಕೊಂಡು, ಎಟಿಎಂ ಕಾರ್ಡ್, ಆನೈಲೈನ್ ಶಾಪಿಂಗ್, ಎಟಿಎಂ ಸ್ಕಿಮ್ಮಿಂಗ್, ಒಟಿಪಿ, ಲಕ್ಕಿ ಡ್ರಾ ಹೆಸರಿನಲ್ಲಿ ನಂಬಿಸಿ, ದೆಹಲಿ, ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಂದ ಕರೆ ಮಾಡುವ ಮೂಲಕ ವಂಚನೆ ಮಾಡುತ್ತಿದ್ದಾರೆ.

ವಂಚನೆ ಮಾಡುವ ಸೈಬರ್​ ಹ್ಯಾಕರ್ಸ್ ಅಲ್ಲಿಯ ವಯೋವೃದ್ದರ ಆಧಾರ್ ಕಾರ್ಡ್ ಪಡೆದುಕೊಂಡು ಬ್ಯಾಂಕ್‌ನಲ್ಲಿ ಖಾತೆ ತೆಗೆಸುವ ಮೂಲಕ ಖಾತೆಗೆ ಹಣವನ್ನ ವರ್ಗಾಯಿಸಿಕೊಂಡು ಬಳಿಕ ತಮಗೆ ಬೇಕಾದ ಖಾತೆಗೆ ಹಣವನ್ನ ವರ್ಗಾವಣೆ ಮಾಡಿಕೊಳ್ಳುವುದು ಇಲ್ಲವೇ ಹಣವನ್ನ ವಿತ್ ಡ್ರಾ ಮಾಡುವ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಿವೆ ಮೂಲಗಳು.

ABOUT THE AUTHOR

...view details