ರಾಯಚೂರು :ರಾಜಕೀಯದಲ್ಲಿ ಅನೈತಿಕ ವ್ಯವಹಾರದಿಂದ ಇತ್ತೀಚಿನ ದಿನಗಳಲ್ಲಿ ಉಪಚುನಾವಣೆಗಳು ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಮಾನಗಳಲ್ಲಿ ರಾಜಕೀಯ ವಿದ್ಯಾಮಾನಗಳಲ್ಲಿ ಅನೈತಿಕ ವ್ಯವಹಾರ ನಡೆಯುತ್ತಿದೆ. ಅದರಿಂದಾಗಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿದೆ. ಇಂತಹ ಅನೈತಿಕ ವ್ಯವಹಾರಗಳಿಂದ ರಾಜಕೀಯ ಅಧಃಪತನವಾಗುತ್ತಿದೆ. ಇದಕ್ಕೆ ನಾವು ದೇಶ ಭಕ್ತರು, ಸುಸಂಸ್ಕೃತರು ಎಂದು ಹೇಳುವವರು ಭಾರತೀಯ ಜನತಾ ಪಾರ್ಟಿಯವರು ಎಂದು ಕಿಡಿಕಾರಿದರು.
ಹಣ, ಅಧಿಕಾರದ ಆಮಿಷದಿಂದ ಬಿಜೆಪಿ ಅಧಿಕಾರಿಕ್ಕೆ ಬಂತು :ರಾಜ್ಯದಲ್ಲಿ ವಾಮ ಮಾರ್ಗದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಹಣ, ಮಂತ್ರಿಗಿರಿ ಆಮಿಷವೊಡ್ಡಿ ರಾಜೀನಾಮೆ ಕೊಡಿಸಿದ್ದಾರೆ. ಆಮಿಷಗಳಿಗೆ ರಾಜೀನಾಮೆ ನೀಡಿದವರಿಗೆ ನೈತಿಕತೆ ಇರಬೇಕು. ಯಾಕೆಂದ್ರೆ, ಜನ ಚುನಾಯಿಸುವ ಜನಪ್ರತಿನಿಧಿಗಳನ್ನ ನಾಯಕರು ಎಂದು ಕರೆಯುತ್ತಾರೆ. ಆದ್ರೆ, ಲೀಡರ್ಗಳನ್ನ, ಪ್ರತಾಪ್ ಗೌಡ ಅಂತಹವರನ್ನ ಹರಾಜು ಹಾಕಲಾಗುತ್ತಿದೆ ಎಂದರು.
ಸ್ವಾರ್ಥಕ್ಕಾಗಿ ರಾಜೀನಾಮೆ ಕೊಟ್ಟರು :ಕುಲಗೆಟ್ಟರು ಸುಖ ಪಡಬೇಕು ಅನ್ನೋ ಗಾದೆ ಮಾತಿನಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಶಾಸಕರು ವೈಯಕ್ತಿಕವಾಗಿ ಸುಖಪಟ್ಟರೆ ಹೊರತು, ಜನರಿಗೇನು ಕೂಡುಗೆ ನೀಡಿದ್ದಾರೆ. ಸಿಎಂ ಬಿ ಎಸ್ ಯಡಿಯೂರಪ್ಪನವರು ಮಂಡಿಸಿದ ಬಜೆಟ್ನಲ್ಲಿ ಜನರಿಗೆ ಕೊಡುಗೆ ನೀಡಿಲ್ಲ. ಬದಲಾಗಿ ಲಕ್ಷಾಂತರ ಕೋಟಿ ರೂ. ಸಾಲ ಮಾಡಿದ್ದಾರೆ ಎಂದು ದೂರಿದರು.