ಲಿಂಗಸುಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು, ಮಸ್ಕಿ, ದೇವದುರ್ಗ ತಾಲೂಕುಗಳಲ್ಲಿ ಲಾಕ್ಡೌನ್ ಮಧ್ಯೆಯು ಅಕ್ರಮ ಮರಳು ಮಾಫಿಯಾ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಕೆಲ ದಿನಗಳಿಂದ ನೂತನ ಮರಳು ನೀತಿ ನಿಯಮ ಉಲ್ಲಂಘಿಸಿ ರಾತ್ರಿ ವೇಳೆ, ದೇವದುರ್ಗ ತಾಲೂಕು ಜಾಲಹಳ್ಳಿ ಸುತ್ತಮುತ್ತಲಿನ ಕೃಷ್ಣಾ ನದಿ ತೀರದಿಂದ ಮರಳು ಸಾಗಣೆ ಮಾಡಲಾಗುತ್ತಿದೆ. ಲಿಂಗಸುಗೂರು ತಾಲೂಕಿನಾದ್ಯಂತ ಕೆಲ ಪ್ರದೇಶಗಳಿಗೆ 18,000- 23,000 ರೂ.ಗೆ ಮರಳು ಮಾರಾಟ ಮಾಡಲಾಗುತ್ತಿದೆ ಎಂಬ ಆಪಾದನೆ ಕೇಳಿಬರುತ್ತಿದೆ.
ಲಿಂಗಸುಗುರಲ್ಲಿ ಅಕ್ರಮ ಮರಳು ಮಾಫಿಯಾ ಮಸ್ಕಿ ಮತ್ತು ಲಿಂಗಸುಗೂರು ತಾಲೂಕುಗಳ ನಾಲಾ, ಹಳ್ಳಗಳಿಂದ ಕೂಡ ಟಿಪ್ಪರ್, ಟ್ರ್ಯಾಕ್ಟರ್ ಮೂಲಕ ಅಕ್ರಮ ಮರಳು ಮಾಫಿಯಾ ನಡೆಯುತ್ತಿದೆ. ಭಾನುವಾರ ಲಾಕ್ ಡೌನ ಕೂಡ ಲೆಕ್ಕಕ್ಕಿಲ್ಲದಂತಾಗಿದ್ದು ಇಂದು ಕೂಡಾ ಮರಳನ್ನು ಸಾಗಿಸಲಾಗುತ್ತಿದೆ.
ಭಾನುವಾರ ಲಾಕ್ಡೌನ್ ನಿಮಿತ್ತ ಜಿಲ್ಲೆಯಾದ್ಯಂತ ಬಂದೋಬಸ್ತ ವ್ಯವಸ್ಥೆ ಮಾಡಲಾಗಿದೆ. ಈ ಮಧ್ಯೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಚಾಲಕರು ವಾಹನದಲ್ಲಿ ಕುಳಿತು ಕೈಬೀಸಿ ಹೋಗುತ್ತಿದ್ದಾರೆ. ಇನ್ನೊಂದಡೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರುವ ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.