ರಾಯಚೂರು:ತುಂಗಭದ್ರಾ ಎಡದಂಡೆ ನಾಲೆ ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ರಾಜಾರೋಷವಾಗಿ ನಡೆಯುತ್ತಿದ್ದು, ನೀರಾವರಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತ ಪರ ಹೋರಾಟಗಾರರು ಆರೋಪಿಸಿದ್ದಾರೆ.
ಅಕ್ರಮವಾಗಿ ಕಾಲುವೆ ನೀರು ಕಬಳಿಕೆ, ಕಣ್ಮುಚ್ಚಿ ಕುಳಿತ ಅಧಿಕಾರಿಗಳು - Tungabhadra canal
ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರಿನ್ನ ಹರಿಸಲಾಗುತ್ತಿದ್ದು, ನೀರಾವರಿ ವ್ಯಾಪ್ತಿಗೆ ಒಳಪಡದ ಜಮೀನಿಗೆ ರೈತರು ರಾಜಾರೋಷವಾಗಿ ನಾಲೆಯ ಮೇಲೆ ಬೃಹತ್ ಗಾತ್ರದ ಮೋಟಾರ್ ಅಳವಡಿಕೆ ಮಾಡಿಕೊಂಡು ಅಕ್ರಮವಾಗಿ ನೀರು ಕಬಳಿಸುತ್ತಿದ್ದಾರೆ.
ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರಿನ್ನ ಹರಿಸಲಾಗುತ್ತದೆ. ಆದರೆ ನಾಲೆಯಲ್ಲಿನ ನೀರನ್ನ ನೀರಾವರಿ ವ್ಯಾಪ್ತಿಗೆ ಒಳಪಡದ ಜಮೀನಿಗೆ ರೈತರು ರಾಜಾರೋಷವಾಗಿ ನಾಲೆಯ ಮೇಲೆ ಬೃಹತ್ ಗಾತ್ರದ ಮೋಟಾರ್ ಆಳವಡಿಕೆ ಮಾಡಿಕೊಂಡು ಅಕ್ರಮವಾಗಿ ನೀರು ಕಬಳಿಸುತ್ತಿದ್ದಾರೆ. ಇದರ ಪರಿಣಾಮ ಕೆಳಭಾಗದ ನೀರಾವರಿಗೆ ಒಳಪಡುವ ರೈತರಿಗೆ ನೀರು ದೊರೆಯದೇ, ಬೆಳೆಗಳು ಒಣಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಗಂಗಾವತಿ, ಕಾರಟಗಿಯ ಮೇಲ್ಭಾಗದಲ್ಲಿ ಈ ಅಕ್ರಮವಾಗಿ ನೀರಾವರಿ ಮಾಡಿಕೊಂಡು ನೀರು ಪಡೆದುಕೊಳ್ಳುತ್ತಿದ್ದಾರೆ. ಇದರ ನೇರ ಪರಿಣಾಮ ಸಿಂಧನೂರು, ಮಾನವಿ, ಸಿರವಾರ ಸೇರಿದಂತೆ ಕೆಳಭಾಗದ ರೈತರ ಮೇಲೆ ಆಗುತ್ತಿದೆ. ಆದ್ರೆ ಇದನ್ನ ತಡೆಯಬೇಕಾದ ನೀರಾವರಿ ಅಧಿಕಾರಿಗಳು ಅಕ್ರಮವಾಗಿ ನೀರಾವರಿ ಮಾಡಿಕೊಂಡು ವ್ಯವಸಾಯ ಮಾಡುವ ರೈತರಲ್ಲಿ ಹಣ ಹಾಗೂ ಭತ್ತವನ್ನ ಪಡೆಯುವ ಮೂಲಕ ಯಾವುದೇ ಕ್ರಮ ಕೈಗೊಳ್ಳದೇ ಅಧಿಕಾರಿಗಳು ಸುಮ್ಮನೆ ಕುಳಿತ್ತಿದ್ದು, ಕೂಡಲೇ ಸಂಬಂಧಿಸಿದ ನೀರಾವರಿ ಸಚಿವರು, ಮೇಲಧಿಕಾರಿಗಳು ಈ ಬಗ್ಗೆ ಕ್ರಮವಹಿಸುವಂತೆ ರೈತ ಪರ ಹೋರಾಟಗಾರರು ಒತ್ತಾಯಿಸಿದ್ದಾರೆ.