ಕರ್ನಾಟಕ

karnataka

ETV Bharat / state

ನಿಯಮ ಬಾಹಿರವಾಗಿ ರಸಗೊಬ್ಬರ ಮಾರಾಟ: 7 ಅಂಗಡಿಗಳ ಪರವಾನಗಿ ರದ್ದು

ರಾಯಚೂರು ಜಿಲ್ಲೆಯಲ್ಲಿ ನಿಯಮ ಬಾಹಿರವಾಗಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಿ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಆದೇಶ ಹೊರಡಿಸಿದ್ದಾರೆ.

ಸಂತೋಷ ಕಾಮಗೌಡ 
ಸಂತೋಷ ಕಾಮಗೌಡ 

By

Published : Aug 22, 2020, 11:00 AM IST

ರಾಯಚೂರು: ನಿಯಮ ಬಾಹಿರವಾಗಿ ಯೂರಿಯಾ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಿ ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ 5, ಕವಿತಾಳ 1, ಸಿರವಾರ 1 ಅಂಗಡಿಯ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಮಾನ್ವಿ ಕೃಷಿ ಅಧಿಕಾರಿಗಳು ಯೂರಿಯಾ ರಸಗೊಬ್ಬರ ಮಾರಾಟಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಅಂಗಡಿಗಳಿಗೆ ಭೇಟಿ ನೀಡಿದ್ದರು.

ಈ‌ ವೇಳೆ ರೈತರು ಹೊಂದಿರುವ ಕೃಷಿ ಕ್ಷೇತ್ರ ಹಾಗೂ ರಸಗೊಬ್ಬರ ಮಾರಾಟ ಮಾಡಿರುವುದರಲ್ಲಿ ಲೋಪದೋಷ ಕಂಡು ಬಂದಿದೆ. ಹೀಗಾಗಿ ಜಿಲ್ಲೆಯ 7 ರಸಗೊಬ್ಬರ ಅಂಗಡಿಗಳ ಪರವಾನಗಿಯನ್ನು ಮಾನ್ವಿ ಕೃಷಿ ಸಹಾಯಕ ಅಧಿಕಾರಿ ಬಿ.ಹುಸೇನ್ ಸಾಬ್ ವರದಿಯ ಮೇಲೆ ಸಹಾಯಕ ಆಯುಕ್ತರು ರದ್ದುಗೊಳಿಸಿ ಆದೇಶಿಸಿದ್ದಾರೆ.

ಪರವಾನಗಿ ರದ್ದು ಆಗಿರುವ ಅಂಗಡಿಗಳು:
ಮಾನ್ವಿಯ ಶ್ರೀರಾಘವೇಂದ್ರ ಟ್ರೇಂಡಿಗ್ ಕಂಪನಿ, ಸೂಗೂರೇಶ್ವರ ಟ್ರೇಡರ್ಸ್, ವಿಜಯಲಕ್ಷ್ಮಿ ಟ್ರೇಡರ್ಸ್, ಬಾಲಾಜಿ ಟ್ರೇಂಡಿಗ್​ ಕಂಪನಿ, ಆರ್.ವಿಠೋಬಶೆಟ್ಟಿ ಆ್ಯಂಡ್ ಸನ್ಸ್, ಸಿರವಾರ ಪಟ್ಟಣದ ವೆಂಕಟೇಶ್ವರ ಫರ್ಟಿಲೈಜರ್ಸ್ ಆ್ಯಂಡ್ ಫೆಸ್ಟಿಸೈಡ್ಸ್, ಕವಿತಾಳ ಪಟ್ಟಣದ ವರಲಕ್ಷ್ಮೀ ಫರ್ಟಿಲೈಜರ್ಸ್.

ABOUT THE AUTHOR

...view details