ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಮುದಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಜಕ್ಕೇರಮಡು ತಾಂಡಾದ ತಿಪ್ಪೆ ಗುಂಡಿಗಳಲ್ಲಿ ಮುಚ್ಚಿಟ್ಟಿದ್ದ ಭಾರಿ ಪ್ರಮಾಣದ ಕೊಳೆಯನ್ನು ಪೊಲೀಸರು ದಾಳಿ ಮಾಡಿ ನಾಶ ಮಾಡಿದ್ದಾರೆ.
ತಿಪ್ಪೆ ಗುಂಡಿಗಳಲ್ಲಿ ಕಳ್ಳಭಟ್ಟಿ ತಯಾರಿಕೆಗೆ ಬಳಸಲು ಮುಚ್ಚಿಟ್ಟಿದ್ದ ಕೊಳೆ ನಾಶ - ಮುದಗಲ್ಲ ಪೊಲೀಸ್ ಠಾಣೆ ವ್ಯಾಪ್ತಿ
ಇಂದು ಬೆಳಗಿನ ಜಾವ ಡಿವೈಎಸ್ಪಿ ಎಸ್.ಎಸ್. ಹುಲ್ಲೂರು ಮಾರ್ಗದರ್ಶನದಲ್ಲಿ ಮಸ್ಕಿ ಸಿಪಿಐ ದೀಪಕ್ ಭೂಸರೆಡ್ಡಿ, ಪಿಎಸ್ಐಗಳಾದ ಡಾಕೇಶ ಮುದಗಲ್ಲ, ಸಣ್ಣ ವಿರೇಶ ಮಸ್ಕಿ ನೇತೃತ್ವದ ತಂಡ ದಾಳಿ ನಡೆಸಿ ಕಳ್ಳಭಟ್ಟಿಗೆ ಬಳಸುವ ಅಪಾರ ಪ್ರಮಾಣದ ಕೊಳೆ ನಾಶ ಮಾಡಿದ್ದಾರೆ.
ಜಕ್ಕೇರಮಡುತಾಂಡಾದ ಸುತ್ತಮುತ್ತಲಿನ ತಿಪ್ಪೆ ಗುಂಡಿಗಳಲ್ಲಿ ಕಳ್ಳಭಟ್ಟಿ ಸಾರಾಯಿಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಬಾಟಲ್, ಪ್ಲಾಸ್ಟಿಕ್ ಕೊಡಗಳಲ್ಲಿ ಚೆಕ್ಕಿ, ಬೆಲ್ಲ ಇತರೆ ರಾಸಾಯನಿಕ ಮಿಶ್ರಿತವಾಗಿದ್ದ 4 ಸಾವಿರಕ್ಕೂ ಅಧಿಕ ಕೊಳೆಯನ್ನು ಪೊಲೀಸರು ನಾಶ ಮಾಡಿದ್ದಾರೆ. ಇನ್ನು ಆರೋಪಿತರಿಂದ 10 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ 30 ಲೀಟರ್ ಕೊಳೆ ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಿವೈಎಸ್ಪಿ ಎಸ್.ಎಸ್. ಹುಲ್ಲೂರು ಮಾರ್ಗದರ್ಶನದಲ್ಲಿ ಮಸ್ಕಿ ಸಿಪಿಐ ದೀಪಕ್ ಭೂಸರೆಡ್ಡಿ, ಪಿಎಸ್ಐಗಳಾದ ಡಾಕೇಶ ಮುದಗಲ್ಲ, ಸಣ್ಣ ವಿರೇಶ ಮಸ್ಕಿ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ.