ರಾಯಚೂರು: ಮುಂದಿನ ಬಸವಕಲ್ಯಾಣ ಬೈ ಎಲೆಕ್ಷನ್‌ನಲ್ಲಿ ನನ್ನ ಸ್ಪರ್ಧೆಯಿಲ್ಲ. ಮಸ್ಕಿ ಕ್ಷೇತ್ರದ ಬೈ ಎಲೆಕ್ಷನ್ ಉಸ್ತುವಾರಿಯನ್ನ ರಾಜ್ಯದ ಮುಖಂಡರು ನೀಡಿದರೆ ನಿರ್ವಹಿಸುವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಬಸವಕಲ್ಯಾಣ ಬೈ ಎಲೆಕ್ಷನ್‌ನಲ್ಲಿ ನಾನು ಸ್ಪರ್ಧಿಸಲ್ಲ: ವಿಜಯೇಂದ್ರ ಸ್ಪಷ್ಟನೆ - by-vijayendra talks about by election
ರಾಜ್ಯದಲ್ಲಿ ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಬಸವಕಲ್ಯಾಣ ಬೈ ಎಲೆಕ್ಷನ್‌ನಲ್ಲಿ ನನ್ನ ಸ್ಪರ್ಧೆಯಿಲ್ಲ ಎಂದ ಬಿ.ವೈ ವಿಜಯೇಂದ್ರ
ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿದ ಅವರು, ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್‌ನಲ್ಲಿ ಗೆಲುವು ಸಾಧಿಸಲಿದ್ದೇವೆ. ಮೊನ್ನೆ ನಡೆದ ಶಿರಾ ಕ್ಷೇತ್ರದ ಬೈ ಎಲೆಕ್ಷನ್ ನನ್ನೊಬ್ಬನಿಂದ ಗೆಲುವು ಸಾಧಿಸಿಲ್ಲ. ಎಲ್ಲ ಮುಖಂಡರ ಹಾಗೂ ಕಾರ್ಯಕರ್ತರ ಶ್ರಮದಿಂದ ಕೇಸರಿ ಬಾವುಟ ಹಾರಿಸಿದ್ದೇವೆ ಎಂದರು.
ಇದಕ್ಕೂ ಮುನ್ನ ಮಂತ್ರಾಲಯದ ರಾಯರ ಸನ್ನಿಧಿಗೆ ಬಿ.ವೈ.ವಿಜಯೇಂದ್ರ ಭೇಟಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದ ದರ್ಶನ ಪಡೆದು ಪೀಠಾಧಿಪತಿ ಸುಭದೇಂದ್ರ ತೀರ್ಥರ ಆಶೀರ್ವಾದ ಪಡೆದರು.