ರಾಯಚೂರು:ಬಿಸಿಲ ತಾಪಮಾನ ಕಳೆದ ವರ್ಷಕ್ಕಿಂತ ಈ ಬಾರಿ 0.5 ರಿಂದ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಮೂಲಕ ಬಿಸಿಲಿನ ಪ್ರಮಾಣ ಏರಿಕೆಯಾಗಿ ಹೈದರಾಬಾದ್ ಕರ್ನಾಟಕ ಜನ ಹೈರಾಣಾಗಿದ್ದಾರೆ.
ಬೇಸಿಗೆ ಕಾಲ ಪ್ರಾರಂಭವಾದರೆ ಸಾಕು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸೂರ್ಯನ ಶಿಖಾರಿ ಶುರುವಾಗುತ್ತದೆ. ಪ್ರತಿ ವರ್ಷ ಬೇಸಿಗೆಯಲ್ಲಿ ತನ್ನ ಪ್ರಖರತೆ ತೋರಿಸಿ ಸೂರ್ಯ ಜನರಿಗೆ ಬಿಸಿ ಗಾಳಿಯ ಶಕೆಯನ್ನು ಅನುಭವಿಸುವಂತೆ ಮಾಡುತ್ತಾನೆ. ಆದರೆ ಕಳೆದ ವರ್ಷಕ್ಕಿಂತ ಪ್ರಸಕ್ತ ಬೇಸಿಗೆ ಕಾಲದಲ್ಲಿ ತಾಪಮಾನ ಹೆಚ್ಚಾಗಿರಲಿದೆ.ಈಗಾಗಲೇ ಮಾ.1 ರಿಂದ 15 ರವರೆಗೆ 0.5 ದಿಂದ 1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಿ ಬೇಸಿಗೆ ಆರಂಭದ ದಿನಗಳಲ್ಲೇ ಜನ ಬಸವಳಿದಿದ್ದಾರೆ.