ರಾಯಚೂರು:ಕಳೆದ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ತಾಲೂಕಿನ ಮನ್ಸಲಾಪೂರ ಗ್ರಾಮದಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ.
ರಾಯಚೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆ; ಮನ್ಸಲಾಪೂರದಲ್ಲಿ ಮೂರು ಮನೆ ಕುಸಿತ - ರಾಯಚೂರು
ರಾಯಚೂರಿನಲ್ಲಿ ಸುರಿದ ಭಾರೀ ಮಳೆಗೆ ಮೂರು ಮನೆಗಳು ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಮನೆಗಳು ಕುಸಿತ
ಗ್ರಾಮದ ಅಜೇರಿ ಭೀಮಪ್ಪ ಅವರ ಮನೆ ಕಳೆದ ಐದಾರು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಮನೆಯ ಮೇಲ್ಛಾವಣಿ ಒಂದು ಭಾಗ ಕುಸಿದಿತ್ತು, ಆದರೆ ಕಳೆದ ರಾತ್ರಿ ನಿರಂತರವಾಗಿ ಸುರಿದ ಮಳೆಗೆ ಸಂಪೂರ್ಣವಾಗಿ ಮನೆ ಕುಸಿದಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಮನೆಯಲ್ಲಿದ್ದ ದವಸ ಧಾನ್ಯಗಳು ಸಂಪೂರ್ಣವಾಗಿ ಹಾಳಾಗಿವೆ.
ಇನ್ನು ರಾಮಕೃಷ್ಣ ಎನ್ನುವವರ ಮನೆ ಹಾಗೂ ಶಂಕ್ರಪ್ಪ ಹೆಳವರ ಎನ್ನುವರ ಮನೆಯ ಮೇಲ್ಛಾವಣಿ ಬಿದ್ದಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.