ಕರ್ನಾಟಕ

karnataka

ETV Bharat / state

ಕೃಷ್ಣಾ ನದಿ ಪ್ರವಾಹದ ಪರಿಣಾಮ​: ಮನೆಯ ತಳಪಾಯ ಕುಸಿತ - House collapse

ಕೃಷ್ಣಾ ನದಿಯ ಪ್ರವಾಹದಿಂದ ಮನೆಗೆ ನೀರು ನುಗ್ಗಿದ ಹಿನ್ನೆಲೆ ಮನೆಯ ತಳಪಾಯ ಕುಸಿದಿರುವ ಘಟನೆ ಜಿಲ್ಲೆಯ ಅರಶಿಣಗಿ ಗ್ರಾಮದಲ್ಲಿ ನಡೆದಿದೆ.

ಮನೆಯ ತಳಪಾಯ ಕುಸಿತ

By

Published : Oct 3, 2019, 8:00 PM IST

ರಾಯಚೂರು: ಕೃಷ್ಣಾ ನದಿಯ ಪ್ರವಾಹದಿಂದ ಮನೆಗೆ ನೀರು ನುಗ್ಗಿದ ಹಿನ್ನೆಲೆ ಮನೆಯ ತಳಪಾಯ ಕುಸಿದಿರುವ ಘಟನೆ ಜಿಲ್ಲೆಯ ಅರಶಿಣಗಿ ಗ್ರಾಮದಲ್ಲಿ ನಡೆದಿದೆ.

ಮನೆಯ ತಳಪಾಯ ಕುಸಿತ

ಪ್ರವಾಹ ಬಂದಾಗ ಕೃಷ್ಣಾ ದಡದಲ್ಲಿ ಬರುವಂತಹ ಅರಿಶಿಣಗಿ ಗ್ರಾಮಕ್ಕೆ ನದಿ ನೀರು ನುಗ್ಗಿತ್ತು. ಈ ವೇಳೆ ಗ್ರಾಮದಲ್ಲಿನ ಸಿದ್ದಮ್ಮ ಎನ್ನುವವರ ಮನೆಯೊಳಗೂ ನೀರು ನುಗ್ಗಿ ವಾಸಕ್ಕೆ ನೆಲೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಇನ್ನೂ ಮನೆಯೊಳಗೆ ದವಸ-ಧಾನ್ಯಗಳನ್ನು ಸಂಗ್ರಹ ಮಾಡಲು ನಿರ್ಮಾಣ ಮಾಡಿದ ಅಗೆವಿನೊಳಗೂ ನೀರು ನುಗ್ಗಿದ್ದು, ಇದರಿಂದಾಗಿ ತಳಪಾಯ ಕುಸಿದಿರುವ ಜತೆಗೆ ಮನೆಯ ಗೋಡೆಗಳೂ ಅಲ್ಲಲ್ಲಿ ಬಿರುಕು ಬಿಟ್ಟಿದೆ.

ಗ್ರಾಮದಲ್ಲಿ ಕೆಲ ಮನೆಗಳು ಬಿರುಕು ಬಿಟ್ಟಿದ್ದು, ಸರ್ಕಾರ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ನೀಡಬೇಕು ೆಂಬ ಒತ್ತಾಯ ಕೇಳಿ ಬರ್ತಿದೆ.

ABOUT THE AUTHOR

...view details