ರಾಯಚೂರು: ಭೀಕರ ರಸ್ತೆ ಅಪಘಾತದಲ್ಲಿ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ರಾಯಚೂರಿನ ಮರ್ಚೇಡ್ ಗ್ರಾಮದ ಜರುಗಿದೆ. ಗ್ರಾಮದ ಹೊರವಲಯದ ತಿರುವಿನಲ್ಲಿ ಬೈಕ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
ನಗರದ ಚಂದ್ರಬಂಡಾ ರಸ್ತೆಯಲ್ಲಿನ ರಘುನಾಥನಹಳ್ಳಿಯ ಹೊನ್ನಪ್ಪ ಈರಣ್ (22) ಮತ್ತು ಎಲ್‌ಬಿಎಸ್ ಬಡವಣೆಯ ನಿವಾಸಿ ಹುಸೇನ್ ಚಂದಪಾಷಾ(21) ಮೃತ ಯುವಕರೆಂದು ಗುರುತಿಸಲಾಗಿದೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಆತನ ಗುರುತು ಪತ್ತೆಯಾಗಿಲ್ಲ.