ರಾಯಚೂರು:ಅಸ್ಕಿಹಾಳ ಹೊರವಲಯದ ಕೃಷ್ಣ ಮೆಡೋಸ್ ಬಡಾವಣೆಯಲ್ಲಿ ಮನೆಯೊಂದಕ್ಕೆ ನುಗ್ಗಿದ ಖದೀಮರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮನೆಗೆ ಕನ್ನ: ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ - ಕೃಷ್ಣ ಮೆಡೋಸ್ ಬಡಾವಣೆ
ರಾಯಚೂರು ನಗರದ ಹೊರವಲಯದಲ್ಲಿರುವ ಕೃಷ್ಣ ಮೆಡೋಸ್ ಬಡಾವಣೆಯ ನಿವಾಸಿ ವೆಂಕಟೇಶ್ವರ ರಾವ್ ಎಂಬುವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿದ ಖದೀಮರು 22 ತೊಲೆ ಚಿನ್ನಾಭರಣ, ಎರಡೂವರೆ ಲಕ್ಷ ರೂಪಾಯಿ ನಗದು ಹಣ ದೋಚಿ ಪರಾರಿಯಾಗಿದ್ದಾರೆ.
ನಗರದ ಹೊರವಲಯದಲ್ಲಿ ಕೃಷ್ಣ ಮೆಡೋಸ್ ಬಡಾವಣೆಯ ನಿವಾಸಿ ವೆಂಕಟೇಶ್ವರ ರಾವ್ ಎಂಬುವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಖದೀಮರು ಮನೆಯೊಳಗೆ ನುಗ್ಗಿ, 22 ತೊಲೆ ಚಿನ್ನಾಭರಣ, ಎರಡೂವರೆ ಲಕ್ಷ ರೂಪಾಯಿ ನಗದು ಹಣ ದೋಚಿ ಪರಾರಿಯಾಗಿದ್ದಾರೆ.
ಮನೆಯೊಳಗೆ ಖದೀಮರು ನುಗ್ಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮನೆಯವರು ಸಂಬಂಧಿಕರ ಮದುವೆ ಸಮಾರಂಭಕ್ಕಾಗಿ ಮನೆಯ ಬೀಗ ಹಾಕಿ ಮದುವೆಗೆ ತೆರಳಿದ್ದರು. ಇದನ್ನ ಗಮನಿಸಿದ ಖದೀಮರು ರಾತ್ರಿ ವೇಳೆ ಮನೆಯ ಬೀಗ ಮುರಿದು, ಮನೆಯಲ್ಲಿದ್ದ ನಗದು ಹಣ, ಚಿನ್ನಾಭರಣವನ್ನ ದೋಚಿ ಪರಾರಿಯಾಗಿದ್ದಾರೆ. ಸದ್ಯ ಘಟನೆಯಿಂದ ನಗರದಲ್ಲಿನ ನಿವಾಸಿಗಳು ಆತಂಕಗೊಂಡಿದ್ದು, ಪೊಲೀಸರು ಖದೀಮರನ್ನ ಸೆರೆ ಹಿಡಿದು ಮಟ್ಟ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನೆ ಬಗ್ಗೆ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.