ರಾಯಚೂರು:ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಗಿರಿಶ್ ಕಾರ್ನಾಡ್ ಅವರಿಗೆಜಿಲ್ಲೆಯ ಮಾನ್ವಿ ತಾಲೂಕಿನಲ್ಲಿಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾನ್ವಿಯಲ್ಲಿ ಗಿರೀಶ್ ಕಾರ್ನಾಡ್ಗೆ ಭಾವಪೂರ್ಣ ಶ್ರದ್ಧಾಂಜಲಿ - ಬಸವ ವೃತ್ತ
ಮಾನ್ವಿಯ ಬಸವ ವೃತ್ತದ ಬಳಿ ಇತ್ತೀಚೆಗೆ ಅಗಲಿದ ಹಿರಿಯ ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡ್ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಮೊಹಮ್ಮದ್ ಮುಜಿಬ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಮಾನ್ವಿಯ ಬಸವ ವೃತ್ತದ ಬಳಿ ತಾಲೂಕು ಕಸಾಪ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಹಾಗೂ ಸಾಹಿತಿಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೃತ್ತದ ಬಳಿ ಕ್ಯಾಂಡಲ್ ಹಚ್ಚಿ, ಗಿರೀಶ್ ಕಾರ್ನಾಡ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಮೊಹಮ್ಮದ್ ಮುಜಿಬ್, ಕರವೇ ಪ್ರವೀಣ ಶೆಟ್ಟಿ ಬಣದ ಸುಬಾನ್ ಬೇಗ್, ಎಸ್ಐಒ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿಶಾನ್ ಸಿದ್ದಿಕಿ, ವಾರ್ಡ್ ನಂ ಸದಸ್ಯ ಶರಣ ಮ್ಯಾದ, ರೇವಣ ಸಿದ್ದಯ್ಯ ಹಿರೇಮಠ, ಮಹಾದೇವಪ್ಪ, ವಾಜಿದ್ ಸಾಜಿದ್, ಪಕ್ಷಿಪ್ರೇಮಿ ಸಲಾಯುದ್ದಿನ್, ಡಾ.ರೋಹಿಣಿ ಮಾನ್ವಿಕರ್, ನಾಗರತ್ನ ಪಾಟೀಲ್, ಮಕ್ಕಳ ಸಾಹಿತಿ ತಾಲೂಕು ಅಧ್ಯಕ್ಷ ಸಾಹಿತಿ ಅಂಬಮ್ಮ ಸೇರಿದಂತೆ ಹಿರಿಯ ಸಾಹಿತಿಗಳು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.