ರಾಯಚೂರು: ನದಿಯಲ್ಲಿ ಪ್ರವಾಹ ಹೆಚ್ಚಾಗಿರುವುದರಿಂದ ಜಿಲ್ಲೆಯ ಕರಕಲ್ ಗಡ್ಡೆಯಲ್ಲಿ ಸಿಲುಕಿದವರನ್ನು ಹೆಲಿಕಾಪ್ಟರ್ ಬಳಸಿ ರಕ್ಷಣೆ ಮಾಡುವ ಸಾಧ್ಯತೆ ಇದೆ.
ಕರಕಲ್ ಗಡ್ಡೆಯಲ್ಲಿ ಸಿಲುಕಿದ ಸಂತ್ರಸ್ತರ ರಕ್ಷಣೆಗೆ ಹೆಲಿಕಾಪ್ಟರ್ ಬಳಕೆ ಸಾಧ್ಯತೆ - NDRF team
ನದಿಯಲ್ಲಿ ಭಾರಿ ಪ್ರವಾಹ ಉಂಟಾದ ಹಿನ್ನೆಲೆ ಕರಕಲ್ ಗಡ್ಡೆಯಲ್ಲಿ ಜನ-ಜಾನುವಾರು ರಕ್ಷಣೆ ಪಡೆದಿದ್ದರು. ಇವರನ್ನು ಕರೆತರಲು ಎನ್‌ಡಿಆರ್‌ಎಫ್ ತಂಡ ಹಾಗೂ ಯೋಧರ ತಂಡ ಮುಂದಾಗಿತ್ತು. ಆದರೆ, ನದಿಯಲ್ಲಿನ ನೀರಿನ ರಭಸಕ್ಕೆ ಬೋಟ್‌ಗಳು ಸಾಥ್ ನೀಡಲಿಲ್ಲ. ಹೀಗಾಗಿ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ಹೆಲಿಕಾಪ್ಟರ್ ಬಳಕೆ ಮಾಡುವ ಸಾಧ್ಯತೆ ಇದೆ.
ನದಿಯಲ್ಲಿ ಭಾರೀ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಕರಕಲ್ ಗಡ್ಡೆಯಲ್ಲಿ ಜನ-ಜಾನುವಾರು ರಕ್ಷಣೆ ಪಡೆದಿದ್ದರು. ಇವರನ್ನ ಕರೆತರಲು ಎನ್‌ಡಿಆರ್‌ಎಫ್ ತಂಡ ಹಾಗೂ ಯೋಧರ ತಂಡ ಮುಂದಾಗಿತ್ತು. ಆದರೆ, ನದಿಯಲ್ಲಿನ ನೀರಿನ ರಭಸಕ್ಕೆ ಬೋಟ್‌ಗಳು ಸಾಥ್ ನೀಡಲಿಲ್ಲ. ಹೀಗಾಗಿ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ಹೆಲಿಕಾಪ್ಟರ್ ಬಳಕೆ ಮಾಡುವ ಸಾಧ್ಯತೆ ಇದೆ.
ಸದ್ಯ ಕರಕಲ್ ಗಡ್ಡೆಯಯಲ್ಲಿ ಸಿಲುಕಿದವರು ಸೇಫ್ ಆಗಿದ್ದಾರೆ. ಆದರೆ, ನಾರಾಯಣಪುರ ಜಲಾಶಯದ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಹಂತ ಹಂತವಾಗಿ ಜಲಾಶಯದಿಂದ 4.75 ಲಕ್ಷ ಕ್ಯೂಸೆಕ್ ನೀರು ಹರಿದು ಬಿಡಲಾಗುತ್ತಿದೆ.